ಸಾರಿಗೆ ಸೆಸ್ ವಿಧಿಸಲು ಚಿಂತನೆ-ಸಚಿವ ಸಂತೋಷ್ ಲಾಡ್
ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಮೋಟಾರು ವಾಹನಗಳ ಖರೀದಿ ಮೇಲೆ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದರಿಂದ 25 ರಿಂದ 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.