ಚಿರತೆಗಾಗಿ ಮುಂದುವರೆದ ಶೋಧಕಾರ್ಯ

ಭಾನುವಾರ, 28 ಆಗಸ್ಟ್ 2022 (17:08 IST)
ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ 24ನೇ ದಿನಕ್ಕೆ ಚಿರತೆ ಸೆರೆ ಕಾರ್ಯಾಚರಣೆ‌ ಕಾಲಿಟ್ಟಿದೆ. ಐದನೇ ದಿನವೂ ಆನೆ, ಜೆಸಿಬಿಗಳ ಕಾರ್ಯಾಚರಣೆ ಮುಂದುವರೆದಿದೆ. ಇಂದು ಕೂಡ ನೂರು ಜನ ಸಿಬ್ಬಂದಿ, ಜೆಸಿಬಿ ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಿದ್ದು, ಪ್ರತಿ ದಿನ 250 ಎಕರೆ ಪ್ರದೇಶ, ಏಳು ಕಿಮೀ ಸುತ್ತಿದ್ರೂ ಚಿರತೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ. ಚಿರತೆ ಸೆರೆಯಾಗದಕ್ಕೆ ಬೆಳಗಾವಿ ನಗರ ಜನರ ಭಯ ಭೀತಿ ದೂರವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಇಂದಿಗೆ 24 ದಿನಗಳಾಗಿವೆ. ಮೈದಾನದಲ್ಲಿ ಓಡಾಡಿ ಕಾಣೆಯಾದ ಚಿರತೆ ಇದುವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿಲ್ಲ. ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಸಿಬ್ಬಂದಿಗಳು ಇದೀಗ ಮಾಸ್ಟರ್ ಪ್ಲಾನ್​ನೊಂದಿಗೆ ಸೆರೆ ಹಿಡಿಯುವ ಪ್ರಯತ್ನವನ್ನು ನಡೆಸಲಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕೋಬಿಂಗ್ ಕಾರ್ಯಾಚರಣೆ ಎಂದರೆ ಬಲೆ ಹಾಕಿ ಕಾರ್ಯಾಚರಣೆ ನಡೆಸುವುದಾಗಿದೆ. ಅಂದರೆ, ಒಂದು ಕಡೆಯಲ್ಲಿ ಬಲೆಯನ್ನು ಹಾಕಿ ಇನ್ನೊಂದು ಕಡೆಯಿಂದ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಬಲೆಗೆ ಹಾಕುವ ಪ್ಲಾನ್​ನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಗಾಲ್ಫ್ ಮೈದಾನದ ತಡೆಗೋಡೆ ಸುತ್ತ ಸುಮಾರು ಮೂರು ಕಿ.ಮೀ. ವರೆಗೆ ಬಲೆಯನ್ನು ಹಾಕಲಾಗಿದೆ. ಹನುಮಾನ್ ನಗರ, ಜಾಧವ್ ನಗರ ಭಾಗದ ಕಡೆಗಳಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಬಲೆ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ