ಗುತ್ತಿಗೆದಾರರು ಪಾಪ ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ-ಡಿಸಿಎಂ ಡಿಕೆಶಿ

ಶುಕ್ರವಾರ, 11 ಆಗಸ್ಟ್ 2023 (15:41 IST)
ಕಾಂಗ್ರೆಸ್ ಶಾಸಕರು ಕ್ಷೇತ್ರಗಳಲ್ಲೂ ತನಿಖೆ ಆಗತ್ತಾ..?ತನಿಖೆ ಎಲ್ಲಾ ಕಡೆಗೂ ಮಾಡುತ್ತಾರೆ .ಕೆಲಸ ಮಾಡಿದರೆ ಬಿಲ್ ಕೊಡ್ತಾರೆ .15 ದಿನ ಒಂದು ತಿಂಗಳು ಬೇಡ್ವಾ?ಮೂರ್ನಾಲ್ಕು ವರ್ಷ ತಡೆದಿದ್ದಾರಲ್ಲ.ಆಗ ಯಾಕೆ ಬಿಲ್ ಕೊಡಲಿಲ್ಲ ಅನ್ನೋದನ್ನ ಬಿಜೆಪಿ ಅವರು ಹೇಳಲಿ.ಗುತ್ತಿಗೆದಾರರು ನೇಣು ಹಾಕಿಕೊಳ್ಳುವುದು ಬೇಡ ದಯಾಮರಣ ಕೋರುವುದು ಬೇಡ.ಅವರ ಹಿಂದೆ ಯಾರಿದ್ದಾರೆ, ಯಾರ್ಯಾರು ಸಹಾಯಕ್ಕೆ ಇದ್ದಾರೆ ಇರಲಿ.ಯಾರು ದುಡ್ಡು ಕೇಳಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ.ನಾನು ನಮ್ಮ ಆಫೀಸರ್ಸ್ ಗೆ ರಿಪೋರ್ಟ್ ಕೇಳಿದ್ದೇನೆ ತನಿಖೆ ಮಾಡಿ ರಿಪೋರ್ಟ್‌ ಕೊಡ್ತಾರೆ.ಗುತ್ತಿಗೆದಾರರು ಪಾಪ ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ.ಅಶೋಕ್ ಅವರಿಗೆ ಬಳಿ ಕೇಳಿದ್ದಾರೆ  ಅಂತಾ ಡಿಕೆಶಿ ಟಾಂಗ್ ನೀಡಿದ್ದಾರೆ.
 
ಕುಮಾರಣ್ಣ ಈಗ ಅಣ್ಣ ಅನ್ನೋ ಹಾಗಿಲ್ಲ ಕುಮಾರಸ್ವಾಮಿಯವರ ಬಳಿ ಕೂಡ ಹೋಗಿದ್ದಾರೆ.ಯಾರು ಕಮಿಷನ್ ಕೇಳಿದ್ದಾರೆ ಹೇಳಲಿ.ಯಾಕೆ ಬಿಲ್ ಕೊಟ್ಟಿಲ್ಲ ಅನ್ನೋದನ್ನ ಹೇಳಿ ಆನಂತರ ಮಿಕ್ಕಿದ್ದು ಮಾತನಾಡುತ್ತೇನೆ ಅಂತಾ ಡಿಕೆಶಿ ಹೇಳಿದ್ರು.ಅಲ್ಲದೇ 7% ಕಮಿಷನ್ ಕೇಳಿದ್ದಾರೆ ಎಂಬ ಕೆಂಪಣ್ಣ‌ ಹೇಳಿಕೆ ವಿಚಾರವಾಗಿ ಕೆಂಪಣ್ಣ ರೆಸ್ಪೆಕ್ಟೆಡ್ ಮ್ಯಾನ್ ಕೆಂಪಣ್ಣ ಹೇಳಿರುವ ಬಗ್ಗೆ ನಂಗೆ ಗೊತ್ತಿಲ್ಲ ಕೆಂಪಣ್ಣ ಅವರು ಹೇಳಿರಲ್ಲ, ಕೆಂಪಣ್ಣ ಯಾರ ಮೇಲೆ ಹೇಳಿದ್ದರು ನಾನು ಫಸ್ಟ್ ಕೇಳೋದು ಇಷ್ಟೇ ಅಶೋಕ ಚಕ್ರವರ್ತಿ ಏನೋ ಮಾತನಾಡುತ್ತಿದ್ದರಲ್ಲ.ನನ್ನ ಪ್ರಶ್ನೆಗೆ ಉತ್ತರ ಕೊಡ್ಲಿ ನಾನು ಯಾರ್ಯಾರೋ ಮಾತಿಗೂ ಉತ್ತರ ಕೊಡಲು ತಯಾರಿಲ್ಲ .ರೆಸ್ಪಾನ್ಸಿಬಲ್ ಜನಕ್ಕೆ ಮಾತ್ರ ಉತ್ತರ ಕೊಡುತ್ತೇನೆ.ರಸ್ತೆಯಲ್ಲಿ ಓಡಾಡೋರಿಗೆಲ್ಲ ಉತ್ತರ ಕೊಡಲು ಆಗಲ್ಲ.ಕೆಂಪಣ್ಣ ‌ಆ ರೀತಿ ಹೇಳಿದ್ದರೆ ಲೋಕಾಯುಕ್ತಕ್ಕೆ ಹೋಗಿ ದೂರು ಕೊಡಲಿ ಅಂತಾ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ