ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ- ಬೊಮ್ಮಾಯಿ

ಗುರುವಾರ, 10 ಆಗಸ್ಟ್ 2023 (19:00 IST)
ಕಾಂಗ್ರೇಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.ಗುತ್ತಿಗೆದಾರರು ರಾಹುಲ್ ಗಾಂಧಿಗೂ ಟ್ವೀಟ್ ಮಾಡಿದಾರೆ.ನಿಮ್ಮವರು 40+15% ಕಮೀಷನ್ ಕೇಳ್ತಿದಾರೆ ಅಂತ ರಾಹುಲ್ ಗಾಂಧಿಗೆ ಟ್ವೀಟ್ ಮಾಡಿದಾರೆ.ಈಗ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಬೇಕಿದೆ.ನಿನ್ನೆ ರಾಹುಲ್ ಗಾಂಧಿ ಭ್ರಷ್ಟಾಚಾರ ಬಗ್ಗೆ ಮಾತಾಡಿದ್ರಲ್ಲ, ಇಲ್ಲಿ ರಾಜ್ಯದಲ್ಲಿ ಅವರ ಸರ್ಕಾರವೇ ಭ್ರಷ್ಟಾಚಾರ ಮಾಡ್ತಿದೆ.ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಲಿ ಅಂತ ಆಗ್ರಹಿಸುತ್ತೇನೆ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಲಿ.24 ಗಂಟೆ ಒಳಗೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡಿಸಲಿ .ಇಲ್ಲದಿದ್ದರೆ ಈ ಸರ್ಕಾರ ಎಟಿಎಂ ಸರ್ಕಾರ ಅಂತ ಸಾಬೀತಾಗಲಿದೆ.ನಮ್ಮ 16 ಜನ ಶಾಸಕರು ಗೆದ್ದಿದ್ದಾರೆ.ನಮ್ಮ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಿಲ್ಲಬಾರದು.ಅಭಿವೃದ್ಧಿ ನಿಲ್ಬಾರ್ದು ಅಂದ್ರೆ  ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲಿ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ