ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ

ಶನಿವಾರ, 10 ಡಿಸೆಂಬರ್ 2022 (17:19 IST)
ರಾಜಧಾನಿ ಬೆಂಗಳೂರಿನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ನಡೆಯುತ್ತಿದೆ. ಈತನಕ ಒಟ್ಟು 6,22,418 ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಸ್ಟಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾಯಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಅಳವಡಿಸಿರುವ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್  ಡಿಜಿಟಲ್ ಮಾಪನಗಳಿಗೆ ಬದಲಾಯಿಸುವ ಕಾರ್ಯ ಇದೇ ಜುಲೈ ತಿಂಗಳಲ್ಲಿ ಆರಂಭಗೊಂಡಿತ್ತು. ಅಕ್ಟೋಬರ್ 17ರ ತನಕ ನಗರದಲ್ಲಿ 2,85,941 ಹೊಸ ಡಿಜಿಟಲ್ ಮೀಟರ್ ಗಳನ್ನು ಹಳೆಯ ಮೀಟರ್ ತೆಗೆದು ಈಗಾಗಲೇ ಬದಲಾಯಿಸಲಾಗಿದೆ. ಅದಾಗಿ 50 ದಿನಗಳಲ್ಲಿ 3,36,477 ಡಿಎಲ್ ಎಮ್ಎಸ್ ಡಿಜಿಟಲ್ ಮೀಟರ್ ಗಳನ್ನು ಬೆಸ್ಕಾಂ  ತನ್ನ ಗ್ರಾಹಕರ ಕಟ್ಟಡಗಳಿಗೆ ಅಳವಡಿಸಿದೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವೃತ್ತಗಳಲ್ಲಿ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ