ಸೂರ್ಯಕಾಂತಿ ರಷ್ಯಾ ಮತ್ತು ಉಕ್ರೇನ್ ದೇಶದ ಪ್ರಮುಖ ಬೆಳೆ. ಜಾಗತಿಕ ಮಾರುಕಟ್ಟೆಯಖಾದ್ಯ ತೈಲ ಪೂರೈಕೆಯಲ್ಲಿ ಪ್ರಮುಖದೇಶಗಳೆನಿಸಿವೆ. ಭಾರತದ ಮಾರುಕಟ್ಟೆಗೆ ಅಧಿಕಪ್ರಮಾಣದಲ್ಲಿ ಗುಣಮಟ್ಟದ ಸೂರ್ಯಕಾಂತಿ ಎಣ್ಣೆ ಉಕ್ರೇನ್, ರಷ್ಯಾದಿಂದ ಆಮದಾಗುತ್ತದೆ.ಯುದ್ಧದಿಂದಾಗಿ ಮಾರುಕಟ್ಟೆಗೆ ಅಡುಗೆ ಎಣ್ಣೆಆವಕ ಕಡಿಮೆಯಾಗುತ್ತಿದೆ. ಪರಿಣಾಮ ಬೆಲೆಏರಿಕೆಯಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುತ್ತಿದೆ.
ಈ ಹಿಂದೆ ವಿವಿಧ ಮಾದರಿಯ ಸೂರ್ಯಕಾಂತಿ ಅಡುಗೆ ಎಣ್ಣೆ ಪ್ರತಿ ಲೀಟರ್ 129 ರೂ.ನಿಂದ 130ರೂ.ವರೆಗೂ ಮಾರಾಟವಾಗುತ್ತಿತ್ತು. ಯುದ್ಧಆರಂಭವಾದ ನಂತರ ಲೀ.ಗೆ 130 ರಿಂದ 180 ರೂ.ವರೆಗೂ ತಲುಪಿದೆ. ಪ್ರತಿ ಲೀಟರ್ ಬೆಲೆಯಲ್ಲಿಸುಮಾರು 40ರೂ. ಏರಿಕೆಯಾಗಿದೆ. ಪರಿಸ್ಥಿತಿ ಹೀಗೆಮುಂದುವರಿದರೆ ಪ್ರತಿ ಲೀ. 200 ರೂ. ದಾಟುವನಿರೀಕ್ಷೆಯಿದೆ ಎಂದು ಹೋಲ್‌ಸೇಲ್ ಅಡುಗೆ ಎಣ್ಣೆ ಮಾರಾಟಗಾರರು ಹೇಳುತ್ತಾರೆ.