ಭಾರೀ ಬೆಲೆ ಏರಿಕೆ ಸಾಧ್ಯತೆ

ಬುಧವಾರ, 23 ಫೆಬ್ರವರಿ 2022 (14:47 IST)
ನವದೆಹಲಿ : ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್ಗೆ ಪತ್ರ ಕಳುಹಿಸಿದ ಬಳಿಕ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್(7,459 ರೂ.) ಹತ್ತಿರ ಬಂದಿದೆ.
 
ಭಾರತದಲ್ಲಿ ಸದ್ಯ ತೈಲಬೆಲೆ ಏರಿಕೆಯಾಗಿಲ್ಲವಾದರೂ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ನಲ್ಲಿ ಮಾರಾಟವಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.18 ರಷ್ಟು ಏರಿಕೆಯಾಗಿದ್ದು ಬೆಲೆ 99.38 ಡಾಲರ್(7,415 ರೂ.)ಗೆ ತಲುಪಿದೆ.

ಈಗ ಪಂಚರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ಏರಿಕೆ ಕಂಡಿಲ್ಲ. ಪಂಚರಾಜ್ಯ ಚುನಾವಣೆ ಅಂತ್ಯವಾದ ಬಳಿಕ ತೈಲಬೆಲೆ ಭಾರತದಲ್ಲೂ ಹೆಚ್ಚಾಗುವ ಸಾಧ್ಯತೆ ಇದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ