ಜಮ್ಮು ಕಾಶ್ಮೀರದಲ್ಲಿ ಡ್ರೋಣ್ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಸ್ಫೋಟಕ ವಶ

ಶುಕ್ರವಾರ, 23 ಜುಲೈ 2021 (19:56 IST)
ಅಂತಾರಾಷ್ಟ್ರೀಯ ಗಡಿಯಿಂದ 8 ಕಿ.ಮೀ. ಒಳಗೆ ಹಾರಾಡುತ್ತ ಬಂದಿದ್ದ ಡ್ರೋಣ್ ಅನ್ನು ಜಮ್ಮುಕಾಶ್ಮೀರದ ಪೊಲೀಸರು ಹೊಡೆದುರುಳಿಸಿದ್ದು, 5 ಕೆಜಿ ತೂಕದ ಸ್ಫೋಟಕಕ್ಕೆ ಬಳಸುವ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದ ಅಂಕುರ್ ಜಿಲ್ಲೆಯಲ್ಲಿ ಶುಕ್ರವಾರ ಡ್ರೋಣ್ ಹೊಡೆದುರುಳಿಸಿದ್ದು, ಸಾಮಾನ್ಯವಾಗಿ ಉಗ್ರರು ಬಳಸುವ ಸುಧಾರಿತ ಸ್ಫೋಟಕ ಉಪಕರಣ ವಶಪಡಿಸಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸ್ಫೋಟಕಗಳನ್ನು ಹೊತ್ತ ಡ್ರೋಣ್ ಹಾರಿ ಬಂದಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ವಾಯುನೆಲೆ ಬಳಿ ಒಂದೇ ಬಾರಿ ಮೂರು ಡ್ರೋಣ್ ಪತ್ತೆಯಾಗಿದ್ದರಿಂದ ರಕ್ಷಣಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಅನಧಿಕೃತವಾಗಿ ಹಾರಿ ಬರುವ ಡ್ರೋಣ್ ಗಳನ್ನು ಹೊಡೆದುರುಳಿಸುತ್ತಿದ್ದಾರೆ.
ಇದೀಗ ಹೊಡೆದುರುಳಿಸಿರುವ ಡ್ರೋಣ್ ಹೇಗೆ ಬಂತು? ಇದರ ಹಿಂದೆ ಲಷ್ಕರೆ ಇ-ತೋಯ್ಬಾ ಸಂಘಟನೆಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ