ಸೋನಿಯಾ ಗಾಂಧಿಗೆ ಕೊರೊನಾ

ಭಾನುವಾರ, 14 ಆಗಸ್ಟ್ 2022 (19:26 IST)
ಎಐಸಿಸಿ‌ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಮತ್ತೆ ಕೊರೊನಾ ವೈರಸ್​ ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ ಅವರಿಗೆ ಪರೀಕ್ಷೆ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಇದರಿಂದ ಅವರು ಮನೆಯಲ್ಲಿಯೇ ಐಸೋಲೇಟ್​ ಆಗಿದ್ದಾರೆ ಎಂದು ಪಕ್ಷ ತಿಳಿಸಿದೆ.
 
ನ್ಯಾಷನಲ್ಡ್​ ಹೆರಾಲ್ಡ್​ ಹಗರಣ ಕುರಿತಂತೆ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಮೊದಲು ಕೊರೊನಾ ತುತ್ತಾಗಿ ಬಳಿಕ ಚೇತರಿಸಿಕೊಂಡಿದ್ದರು. ಬಳಿಕ ವೈದ್ಯರ ನೇತೃತ್ವದಲ್ಲಿ ಮೂರು ದಿನ ಇಡಿ ವಿಚಾರಣೆ ಎದುರಿಸಿದ್ದರು. 
 
ಇದೀಗ ಎರಡನೇ ಬಾರಿಗೆ ಕೊರೊನಾ ತಗುಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ