ಒಮ್ಮೆ ಕೊರೋನಾ ಬಂದ ಮೇಲೆ ಇನ್ನು ಬರಲ್ಲ ಎಂದು ಆರಾಮವಾಗಿರಬೇಡಿ!
ಶನಿವಾರ, 17 ಏಪ್ರಿಲ್ 2021 (10:12 IST)
ಬೆಂಗಳೂರು: ಒಮ್ಮೆ ಕೊರೋನಾ ಬಂದು ಹೋಗಿದೆ. ಇನ್ನು ಹೇಗಿದ್ದರೂ ನಡಿಯುತ್ತೆ ಎಂಬ ಭಾವನೆಯಲ್ಲಿದ್ದರೆ ಇಂದೇ ಬಿಟ್ಟು ಬಿಡುವುದು ಒಳಿತು.
ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಬಾರಿ ಕೊರೋನಾ ತಗುಲಬಾರದೆಂದೇನಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ನಮ್ಮ ಸಿಎಂ ಯಡಿಯೂರಪ್ಪ. ಕೆಲವು ತಿಂಗಳುಗಳ ಹಿಂದೆ ಕೊರೋನಾ ಸೋಂಕಿಗೊಳಗಾಗಿದ್ದ ಯಡಿಯೂರಪ್ಪ ಈಗ ಮತ್ತೆ ಸೋಂಕಿತರಾಗಿದ್ದಾರೆ.
ಒಮ್ಮೆ ಕೊರೋನಾ ಬಂದ ಮೇಲೆ ಅದು ನಮಗೆ ಪಾಠವಾಗಬೇಕು. ಮಾಸ್ಕ್ ಧರಿಸುವುದು, ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಕೆಲವರಿಗೆ ಮೊದಲ ಬಾರಿಗೆ ಸಣ್ಣ ಲಕ್ಷಣಗಳಿಂದ ಸೋಂಕು ಕಂಡುಬಂದಿದ್ದರೂ, ಎರಡನೆಯ ಬಾರಿಯೂ ಹಾಗೆಯೇ ಆಗಬೇಕೆಂದೇನಿಲ್ಲ. ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಅದರಲ್ಲೂ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಒಮ್ಮೆ ಬಂದ ಮೇಲೆ ಇನ್ನು ಬರಲ್ಲ ಎಂದು ಆರಾಮವಾಗಿರಬೇಡಿ.