ತಾಯಿ-ಮಗ, ಚಿಕ್ಕಮ್ಮನಲ್ಲಿ ಕೊರೊನಾ ಕೇಸ್ ದೃಢ : ಬೆಚ್ಚಿಬಿತ್ತು ಈ ಜಿಲ್ಲೆ

ಮಂಗಳವಾರ, 24 ಮಾರ್ಚ್ 2020 (16:21 IST)
ಮೆಕ್ಕಾ ಯಾತ್ರೆಯಿಂದ ಹಿಂದಿರುಗಿದ್ದ ಮಹಿಳೆಯೊಬ್ಬರಲ್ಲಿ ಕೋವಿಡ್ 19 ವೈರಸ್ ಇರೋದು ಪಕ್ಕಾ ಆಗಿದೆ. ಈ ಮೂಲಕ ಈ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮೂರು ಜನರ ಪೈಕಿ 56 ವರ್ಷದ ಮತ್ತೊಬ್ಬ ಮಹಿಳೆಯಲ್ಲೂ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ.

ಗೌರಿಬಿದನೂರು ನಗರದ ಚೌಡೇಶ್ವರಿ ಬಡಾವಣೆಯ 31 ರ ಪ್ರಾಯದ ವ್ಯಕ್ತಿಯೊಬ್ಬರು ಕಳೆದ ಫೆಬ್ರುವರಿಯಲ್ಲಿ ತಮ್ಮ ತಾಯಿ ಮತ್ತು ತೊಂಡೆಬಾವಿಯಲ್ಲಿರುವ ಚಿಕ್ಕಮ್ಮನ ಜತೆ ಮೆಕ್ಕಾ ಯಾತ್ರೆ ಕೈಗೊಂಡಿದ್ದರು. ಮಾರ್ಚ್ 14 ರಂದು ಯಾತ್ರೆಯಿಂದ ವಾಪಾಸಾಗಿದ್ದರು. ಈ ಪೈಕಿ ಆರೋಗ್ಯ ಹದಗೆಟ್ಟ ಕಾರಣಕ್ಕೆ ತಾಯಿ–ಮಗ ಬೆಂಗಳೂರಿಗೆ ತೆರಳಿ ತಪಾಸಣೆ ಮಾಡಿಸಿಕೊಂಡ ವೇಳೆ ಮಗನಲ್ಲಿ ಕೋವಿಡ್‌ ಸೋಂಕಿರುವುದು ಮಾ.21 ರಂದು ದೃಢಪಟ್ಟಿತ್ತು.

ಸೋಂಕಿತ ವ್ಯಕ್ತಿಯ ಚಿಕ್ಕಮ್ಮನನ್ನು ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ತಪಾಸಣೆಗೆ ದಾಖಲಿಸಿ, ನಿಗಾ ವ್ಯವಸ್ಥೆಯಲ್ಲಿಡಲಾಗಿತ್ತು. ಅವರಲ್ಲೂ ಸೋಂಕು ಇರುವುದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್‌ ಗೌಡ ಖಚಿತಪಡಿಸಿದ್ದಾರೆ.

ಸದ್ಯ, ಮಗ ಮತ್ತು ತಾಯಿಗೆ ಬೆಂಗಳೂರಿನಲ್ಲಿ, ಚಿಕ್ಕಮ್ಮನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ