ಕೊರೊನಾ ರೋಗಿಗಳಿರುವ ಆಸ್ಪತ್ರೆಗಳಲ್ಲಿ ಔಷಧ ಸಿಂಪರಣೆ

ಮಂಗಳವಾರ, 24 ಮಾರ್ಚ್ 2020 (16:03 IST)
ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಔಷಧ ಸಿಂಪರಣೆ ಮಾಡಲಾಗುತ್ತಿದೆ.

ಕಲಬುರಗಿಯ ಜಿಮ್ಸ್ ಮತ್ತು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಮತ್ತು ಸುತ್ತಮುತ್ತ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಡಿಸ್ ಇನ್ಫೆಕ್ಷನ್ ಔಷಧ ಸಿಂಪರಣೆ ಕಾರ್ಯ ನಡೆಯಿತು.

ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣವುಳ್ಳ ಡಿಸ್‍ಇನ್‍ಫೆಕ್ಷನ್ ಔಷಧಿ ಸಿಂಪಡಿಸಲಾಯಿತು. ಸಾಯಂಕಾಲ ನೀರು ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವುಳ್ಳ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್  ಮಾಡಲಾಗುತ್ತಿದೆ. ಈ ಅಸ್ಪತ್ರೆಗಳ ಆವರಣದ ಮತ್ತು ಸುತ್ತಮುತ್ತ ಪ್ರತಿ ದಿನವು ಔಷಧಿ ಸಿಂಪಡಿಸುವ ಕಾರ್ಯ ಮುಂದುವರಿಯಲಿದೆ.

ಕಲಬುರಗಿಯಲ್ಲಿ ಸಂಪೂರ್ಣವಾಗಿ ಕೊರೋನಾವನ್ನು ಹತೋಟಿಯಲ್ಲಿಡಲು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಿರ್ದೇಶನದಂತೆ  ಈ ರೀತಿಯ ಔಷಧಿ ಸಿಂಪರಣೆ ಕಾರ್ಯ ಆರಂಭಗೊಂಡಿದೆ.

ಕಂಟೇನ್ ಮೆಂಟ್ ಝೋನ್ ನಲ್ಲಿ ಸಿಂಪರಣೆ: ಕಲಬುರಗಿ ನಗರದಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಗಳ ವಾಸಸ್ಥಾನಗಳಾದ ಕಲಬುರಗಿಯ ವಾರ್ಡ್ ನಂ.14 ಮತ್ತು 30 ರಲ್ಲಿ  ಔಷಧಿ ಸಿಂಪರಣೆ ಜೊತೆ ಸ್ಯಾನಿಟೈಜೇಷನ್ ಔಷಧಿ ಸಿಂಪರಣೆ‌ ನಡೆಯಲಿದೆ. ಮುಂದಿನ ಒಂದು ತಿಂಗಳು ಕಾಲ ನಗರದೆಲ್ಲೆಡೆ ಈ ರೀತಿಯ ನಿರಂತರ ಔಷಧಿ ಸಿಂಪರಣೆ ಕಾರ್ಯ ಮುಂದುವರೆಯಲಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ