ಕೊರೊನಾ ಎಫೆಕ್ಟ್ : ಮನೆ ಬಾಗಿಲಿಗೇ ಬಂತು ದಿನಸಿ

ಭಾನುವಾರ, 29 ಮಾರ್ಚ್ 2020 (17:32 IST)
ಕೋವಿಡ್-19 ಹರಡದಂತೆ 21 ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿರೋದ್ರಿಂದ ಜನರ ಮನೆ ಬಾಗಿಲಿಗೇ ಇದೀಗ ಕಿರಾಣಿ ವಸ್ತುಗಳು ಬರುತ್ತಿವೆ.

ರಾಮನಗರದ ಚನ್ನಪಟ್ಟಣ ತಾಲ್ಲೂಕಿನ  ಚಕ್ಕರೆ ಗ್ರಾಮ ಪಂಚಾಯಿತಿಯಿಂದ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಗ್ರಾಮದಲ್ಲಿ ಪಡಿತರ ಅಂಗಡಿಗಳಿಂದ ನೀಡಲಾಗುವ ಅಕ್ಕಿ ಮತ್ತು ರಾಗಿಯನ್ನು ನೀಡಲಾಗುತ್ತದೆ. ಮಿತವ್ಯಯವಾಗಿ ಸಾಮಾನ್ಯವಾಗಿ ಅಡುಗೆ ಮಾಡಿಕೊಂಡು ಜೀವನ ನಡೆಸಲು ಬೇಕಿರುವ ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ.  ಗ್ರಾಮದಲ್ಲಿ ಮೊದಲ ಆದ್ಯತೆಯ ಮೇಲೆ 100 ಬಡ ಕುಟುಂಬಗಳಿಗೆ ನೀಡಲು ಯೋಜಿಸಲಾಗಿದೆ.

1 ಕೆ.ಜಿ. ಬೇಳೆ, 1 ಕೆ.ಜಿ. ಎಣ್ಣೆ, 2 ಕೆ.ಜಿ. ರವೆ, ಉಪ್ಪು, ಟೀ ಪುಡಿ, ಸಕ್ಕರೆ, ಉರುಳಿ ಕಾಳು , ಅವರೇ ಕಾಳು, ಸಾಂಬರ್ ಪುಡಿ, ಈರುಳ್ಳಿಯನ್ನು  ಪ್ಯಾಕೆಟ್ ಮಾಡಲಾಗಿದೆ. ಮೊದಲ ಆದ್ಯತೆ ಮೇರೆಗೆ 100 ಕುಟುಂಬಗಳಿಗೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಮನೆಗೆ ತಲುಪಿಸಲಾಗುತ್ತಿದೆ.

ಗ್ರಾಮದಲ್ಲಿ ಒಂದು ವರ್ಷದ ಹಿಂದೆಯೇ ಕಟ್ಟಡ ಕಾರ್ಮಿಕರು ಹಾಗೂ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುವ 10 ಕುಟುಂಬಗಳಿದ್ದು, ಅವರಿಗೆ ಸದರಿ ಆಹಾರ ಸಾಮಗ್ರಿಗಳ ಜೊತೆಗೆ ಪಡಿತರ ಚೀಟಿ ಇಲ್ಲದಿರುವುದರಿಂದ ಅಕ್ಕಿ ಸಹ ನೀಡಲಾಗುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ