ಬೆಂಗಳೂರು: ಜಿಎಸ್ ಟಿ ಕಡಿತ ಮಾಡಿರುವುದು ದೇಶದ ಬಡಜನರಿಗೆ ಮೋದಿ ಸರ್ಕಾರದ ದೀಪಾವಳಿ ಗಿಫ್ಟ್ ಎಂದು ಬಿಜೆಪಿ ನಾಯಕ ಆಶೋಕ್ ಬಣ್ಣಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಮೋದಿ ಸರ್ಕಾರದ ನಡೆ ಐತಿಹಾಸಿಕ ಎಂದು ಕೊಂಡಾಡಿದ್ದಾರೆ.
ಜಿಎಸ್‍ಟಿ ಇಳಿಕೆ ಮೂಲಕ ಜನ ಸಾಮಾನ್ಯರಿಗೆ ದಸರಾ-ದೀಪಾವಳಿ ಬಂಪರ್ ಗಿಫ್ಟ್ ನೀಡಿದ ಮೋದಿ ಸರ್ಕಾರ. ದಿನಬಳಕೆ ವಸ್ತುಗಳು, ಆರೋಗ್ಯ, ವಾಹನ, ವೈಯುಕ್ತಿಕ ವಿಮೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿಎಸ್‍ಟಿ ಕಡಿತಗೊಳಿಸುವ ಮೂಲಕ ಪ್ರಧಾನಿ ಮೋದಿ ಸರ್ಕಾರವು ಜನಸಾಮಾನ್ಯರಿಗೆ ಬಂಪರ್ ಕೊಡುಗೆ ನೀಡಿದೆ.
ಜಿಎಸ್‌ಟಿ ದರ ಕಡಿತ ಮತ್ತು ಪ್ರಕ್ರಿಯೆ ಸುಧಾರಣೆಗಳ ಈ ಐತಿಹಾಸಿಕ ನಿರ್ಧಾರವು ಬಡವರು ಮತ್ತು ಮಧ್ಯಮ ವರ್ಗಕ್ಕೆ ಭಾರಿ ಅನುಕೂಲವಾಗಲಿದ್ದು, ಆರ್ಥಿಕತೆಗೆ ಹೊಸ ಚೈತನ್ಯ ತುಂಬಲಿದೆ.
ಔಷಧಗಳು, ಆರೋಗ್ಯಪರಿಕರಗಳು, ವೈಯುಕ್ತಿಕ ಆರೋಗ್ಯ ವಿಮೆಗಳ ಮೇಲಿನ ಜಿಎಸ್‍ಟಿ ದರವನ್ನು 18% ದಿಂದ ಕೇವಲ 5% ಗೆ ಇಳಿಕೆ ಮಾಡಲಾಗಿದ್ದು, ಸರ್ಕಾರ ಜನಸಾಮಾನ್ಯರ ಬೇಡಿಕೆಗೆ ಸ್ಪಂದಿಸದೆ.
ಈ ಐತಿಹಾಸಿಕ ಜಿಎಸ್ಟಿ ಸುಧಾರಣೆಗಳು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಕೇಂದ್ರಿತ, ಜನಸ್ನೇಹಿ ಆಡಳಿತಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಆರ್ ಅಶೋಕ್ ಕೊಂಡಾಡಿದ್ದಾರೆ.