ಬಿಬಿಎಂಪಿ ಪಿಜಿ ಹಾಸ್ಟೆಲ್ ಮಾರ್ಗಸೂಚಿ ಬಿಡುಗಡೆ

ಗುರುವಾರ, 13 ಜನವರಿ 2022 (17:55 IST)
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಅಪಾರ್ಟ್‌ಮೆಂಟ್, ನರ್ಸಿಂಗ್ ಕಾಲೇಜು, ಹಾಸ್ಟೆಲ್, ಪಿಜಿಗಳಿಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಿದೆ.
ಕೊರೊನಾ ನಿಯಮಾವಳಿಗಳನ್ನು ತಪ್ಪದೆ ಪಾಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಎರಡು ಡೋಸ್ ಲಸಿಕೆ ಹಾಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ತಾಕೀತು ಮಾಡಲಾಗಿದೆ. ಕೊರೊನಾ ಹೆಚ್ಚಳವಾದಲ್ಲಿ ತಕ್ಷಣವೇ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವುದು ಕಡ್ಡಾಯ. ಕೊರೊನಾ ಮಿತಿ ಮೀರಿದರೆ ತಾತ್ಕಾಲಿಕವಾಗಿ ಕಾಲೇಜು, ಹಾಸ್ಟೆಲ್, ಪಿಜಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.
 
ಬೆಂಗಳೂರು ನಗರದ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿರುವ ಅಪಾರ್ಟ್‌ಮೆಂಟ್‌ಗಳ ಸಂಬಂಧವೂ ಮಹಾನಗರ ಪಾಲಿಕೆ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ