ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಸಗಟು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ವೀಕೆಂಡ್ ಕರ್ಫ್ಯೂ ಜಾರಿ ಹಾಗೂ ಶೇ. 50- 50 ನಿಯಮ ಜಾರಿಗೆ ಬಂದಿದೆ.
ಮಾರ್ಕೆಟ್ ನಲ್ಲಿ ಜನ ಜಂಗುಳಿ ಹೆಚ್ಚಾಗಿದೆ. ಸಾಮಾನ್ಯ ದಿನದಂತೆ ಖರೀದಿ ಜೋರಾಗಿದ್ದು, ಸಂಕ್ರಾಂತಿ, ವೈಕುಂಠ ಏಕಾದಶಿ ಹಬ್ಬಕ್ಕಾಗಿ ವ್ಯಾಪಾರ ವಹಿವಾಟು ಹೆಚ್ಚಿದೆ.
ಈ ಎಲ್ಲ ಕಾರಣಗಳಿಂದ ಮಾರುಕಟ್ಟೆಯನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಗ್ರೌಂಡ್ ಗೆ ಸ್ಥಳಾಂತರಿಸುವ ಬಗ್ಗೆ ಪಾಲಿಕೆ ಚರ್ಚೆಯಲ್ಲಿ ತೊಡಗಿದೆ. ಜನರ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮಗಳು ಸವಿವರ ವರದಿ ಪ್ರಕಟಿಸಿ ಸರಕಾರ ಹಾಗೂ ಅಧಿಕಾರಿಗಳ ಗಮನ ಸೆಳೆದಿದೆ.
ಈ ಹಿನ್ನೆಲೆಯಲ್ಲಿ ಹೂ- ಹಣ್ಣು, ತರಕಾರಿ ವ್ಯಾಪಾರ ಸ್ಥಳವನ್ನು ನ್ಯಾಷನಲ್ ಕಾಲೇಜು ಗ್ರೌಂಡ್ ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಈ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುಳಿವು ನೀಡಿದ್ದಾರೆ.