ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿ ಕೊರೊನಾ ಸೋಂಕಿಗೆ ಯುವ ಜನಾಂಗ ಹೆಚ್ಚು ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಎರಡನೇ ಅಲೆ ವೇಳೆಯಲ್ಲಿ ಕೊರೊನಾ ಸೋಂಕಿಗೆ ಯುವಕರೇ ಹೆಚ್ಚು ತುತ್ತಾಗಿದ್ದರು.
ಬೆಂಗಳೂರು ನಗರದಲ್ಲಿ ಈಗಾಗಲೇ 32 ಸಾವಿರ ಸಕ್ರಿಯ ಕೇಸ್‌ಗಳಿವೆ. ಅದರಲ್ಲಿ 20 ಸಾವಿರ ಸೋಂಕಿತರು ಯುವಜನಾಂಗವೇ ಆಗಿದ್ದಾರೆ. ಮೂರನೇ ಅಲೆಯಲ್ಲಿ 20-39 ವರ್ಷದೊಳಗಿನ ಯುವಕರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದು, ಪ್ರತಿದಿನ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಯುವಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ. ಕಳೆದ ಐದು ದಿನದಲ್ಲಿ ಬರೊಬ್ಬರಿ 8 ಸಾವಿರ ಯುವಕರಲ್ಲಿ ಸೋಂಕು ಪತ್ತೆಯಾಗಿದೆ.