ಪಾದಯಾತ್ರೆಯಲ್ಲ ಕೊರೊನಾಯಾತ್ರೆ

ಸೋಮವಾರ, 10 ಜನವರಿ 2022 (14:51 IST)
ಪಾದಯಾತ್ರೆಯಿಂದ ಜನರಿಗೆ ನೀರು ಸಿಗಲ್ಲ ಬದಲಿಗೆ ಕೋವಿಡ್ ಸಿಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ತಾನು ಚಾಂಪಿಯನ್ ಆಗಬೇಕು, ಸಿಎಂ ಅಗಬೇಕು ಎನ್ನುವ ಲೆಕ್ಕದಲ್ಲಿದ್ದಾರೆ.ನೀರು ಕೊಡುವ ಬದಲು ರಾಜ್ಯದ ಜನರಿಗೆ ಕೋವಿಡ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಜ್ವರ ಅಂತಾ ಸುಸ್ತಾಗಿ ವಾಪಾಸ್ ಬಂದಿದ್ದಾರೆ. ಅವರು ಯಾವುದೇ ಪಕ್ಷದವರು ಇರಬಹುದು. ಆರೋಗ್ಯ ಬಹಳ ಮುಖ್ಯ. ಇದೇ ಉದ್ದೇಶದಿಂದಲೇ ಕಾಂಗ್ರೆಸ್ ನವರಿಗೆ ಪ್ರಾರ್ಥನೆ ಮಾಡುತ್ತಾ ಬಂದಿದ್ದೇನೆ. ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ರಾಜ್ಯದ ಜನರಿಗೆ ಕೋವಿಡ್ ಹರಡುವುದನ್ನು ನಾನು ಖಂಡಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ