ಕೊರೋನಾ ನಿಯಂತ್ರಣವಾಗಬೇಕು, ಲಾಕ್ ಡೌನ್ ಬೇಡ!

ಮಂಗಳವಾರ, 18 ಮೇ 2021 (12:26 IST)
ಬೆಂಗಳೂರು: ಲಾಕ್ ಡೌನ್ ಮುಕ್ತಾಯವಾಗಲು ಇನ್ನು ಒಂದು ವಾರ ಬಾಕಿ ಉಳಿದಿದೆ. ಆದರೆ ಕೊರೋನಾ ನಿಯಂತ್ರಣವಾಗಬೇಕಾದರೆ ಲಾಕ್ ಡೌನ್ ಅನಿವಾರ್ಯ ಎಂದು ತಜ್ಞರು ಹೇಳುತ್ತಿದ್ದಾರೆ.


ರಾಜ್ಯ ಸರ್ಕಾರವೂ ಕನಿಷ್ಠ ಇನ್ನು ಒಂದು ವಾರದ ಮಟ್ಟಿಗೆ ಲಾಕ್ ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ. ಆದರೆ ಜನ ಸಾಮಾನ್ಯರು ಮಾತ್ರ ಮತ್ತೆ ಲಾಕ್ ಡೌನ್ ಅರಗಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಕೊರೋನಾ ನಿಯಂತ್ರಣವಾಗಬೇಕು, ಆದರೆ ಲಾಕ್ ಡೌನ್ ಬೇಡ ಎನ್ನುವ ಮಂದಿಯೇ ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಈಗಾಗಲೇ 28 ದಿನಗಳಿಂದ ಜನತಾ ಕರ್ಫ್ಯೂ, ಲಾಕ್ ಡೌನ್ ಎಂದು ಜನರ ತುತ್ತಿನ ಚೀಲ ಬಂದ್ ಆಗಿದೆ. ಈಗಾಗಲೇ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ವಿಸ್ತರಿಸಿದರೆ ಇನ್ನಷ್ಟು ಜನ ಕೆಲಸ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಎನ್ನುವುದು ಜನರ ಅಳಲು. ಕೊರೋನಾ ನಿಯಂತ್ರಿಸಲು ಚಿಕಿತ್ಸೆ ಸೌಲಭ್ಯ ಹೆಚ್ಚಿಸಲಿ ಅದರ ಹೊರತಾಗಿ ಲಾಕ್ ಡೌನ್ ಮಾಡುತ್ತಾ ಕೂತರೆ ಜನ ಹಸಿವಿನಿಂದ ಸಾಯಬೇಕಾಗುತ್ತದೆ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ