ಹಾವೇರಿಯ ಇಬ್ಬರಿಗೆ ಕೊರೊನಾ ಲಕ್ಷಣ : ವರದಿಯಲ್ಲಿ ಬಂದದ್ದೇನು?

ಸೋಮವಾರ, 16 ಮಾರ್ಚ್ 2020 (18:18 IST)
ವಿದೇಶದಿಂದ ಬಂದಿದ್ದ ಇಬ್ಬರು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದರು.

 ಹಾವೇರಿ ಜಿಲ್ಲೆಯ ಹಾನಗಲ್ ಗೆ ವಾಪಸ್ಸಾಗಿದ್ದ ಮೂವರು ವ್ಯಕ್ತಿಗಳಲ್ಲಿ ಇಬ್ಬರಿಗೆ ಕೋವಿಡ್ 19 ವೈರಸ್ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರ ರಕ್ತ ಹಾಗೂ ಕಫದ ಮಾದರಿ ಸಂಗ್ರಹಿಸಲಾಗಿತ್ತು. ಅದನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಪರೀಕ್ಷೆಯ ವರದಿ ಬಂದಿದ್ದು, ಇಬ್ಬರಿಗೂ ಕರೋನಾ ವೈರಸ್ ಇಲ್ಲದಿರುವುದು ಧೃಡಪಟ್ಟಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯ್ಕ ತಿಳಿಸಿದ್ದಾರೆ. ಆ ಮೂಲಕ ಜನರಲ್ಲಿ ಭೀತಿ ದೂರವಾದಂತಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ