ಕೊರೊನಾ ಒಂದು ಕೆ.ಜಿ. ಗೆ 2 ಸಾವಿರ ರೂಪಾಯಿ!

ಭಾನುವಾರ, 15 ಮಾರ್ಚ್ 2020 (16:38 IST)

ಇಡೀ ಜಗತ್ತಿನ ದೇಶಗಳೇ ಕೊರೊನಾ ವೈರಸ್ ಗೆ ಬೆದರಿ ಬೆಂಡಾಗುತ್ತಿದ್ದರೆ, ಈ ಊರಲ್ಲಿ ಮಾತ್ರ 2 ಸಾವಿರ ರೂಪಾಯಿ ಕೊಟ್ರೆ ಒಂದು ಕೆ.ಜಿ.ಕೊರೊನಾ ನಿಮಗೆ ಸಿಗುತ್ತದೆ.
 

ಅಚ್ಚರಿಯಾದರೂ ನೀವು ನಂಬಲೇಬೇಕಾದ ವಿಷಯ ಕೇಳಿಬರುತ್ತಿರುವುದು ಮಂಗಳೂರಿನಲ್ಲಿ. ಅಂದ್ಹಾಗೆ ಕೊರೊನಾ ವೈರಸ್ ಇಲ್ಲಿ ನಿಮಗೆ ಸಿಗೋದಿಲ್ಲ. ಆದರೆ ಅಪರೂಪದ ಕೊರೊನಾ ಮೀನು ಮಾತ್ರ ಸಿಗುತ್ತಿದೆ.

ಕೊರೊನಾ ಮೀನನ್ನು ಮುಗಿಬಿದ್ದು ಜನರು ಖರೀದಿ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ. ಕೊರೊನಾ ಮೀನು 1,750 ರೂಪಾಯಿಯಿಂದ 2,000 ರೂ.ಗಳಿಗೆ ಮಾರಾಟವಾಗುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ