
ಕೊರೊನಾ ವೈರಸ್ ಎಫೆಕ್ಟ್ ಎಲ್ಲೆಡೆ ಕಂಡುಬರುತ್ತಿದ್ದು, ಕೆಲವೆಡೆ ಮಾರಾಟಗಾರರು, ಗ್ರಾಹಕರು ಕಂಗಾಲಾಗುವಂತೆ ಮಾಡಿದೆ.
	 
	ಕೊರೊನಾ ವೈರಸ್ ಭೀತಿಯಿಂದಾಗಿ ಮಂಗಳೂರು, ಕಾರವಾರ ಸೇರಿದಂತೆ ಹಲವೆಡೆ ಮೀನು ಮಾರಾಟದ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. 
	ಕೆಲವೆಡೆ ಮೀನು ಹಾಗೂ ಮಾಂಸವನ್ನು ಕೇಳೋರೇ ಇಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಮೀನು ಮಾರಾಟಗಾರರು ಹೈರಾಣಾಗುವಂತೆ ಆಗಿದೆ. 
 
		
