ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿದ ಕೊರೋನಾ

ಮಂಗಳವಾರ, 24 ಮಾರ್ಚ್ 2020 (09:26 IST)
ಬೆಂಗಳೂರು: ಕೊರೋನಾವೈರಸ್ ಹರಡದಂತೆ ಸರ್ಕಾರಗಳೇನೋ ಸಂಪೂರ್ಣ ಲಾಕ್ ಡೌನ್ ಎಂದು ಘೋಷಿಸಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡಾ. ಆದರೆ ಇದರಿಂದಾಗಿ ಅತೀವ ಸಂಕಷ್ಟಕ್ಕೀಡಾಗಿರುವವರು ದಿನಗೂಲಿಯನ್ನು ನಂಬಿ ಜೀವನ ನಡೆಸುತ್ತಿರುವವರು.


ಆಟೋ ಚಾಲಕರು, ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರು ಇತ್ಯಾದಿ ನೌಕರ ವರ್ಗದವರಿಗೆ ಅತೀವ ಸಂಕಷ್ಟವಾಗಿದೆ. ಅಲ್ಲದೆ ಸಾಲ ಸೋಲ ಮಾಡಿ ಸ್ವಯಂ ವೃತ್ತಿ ಮಾಡುವ ವ್ಯಾಪಾರಿಗಳಿಗೂ ಭವಿಷ್ಯದ ಚಿಂತೆಯಾಗಿದೆ.

ಭಾರತದಲ್ಲಿ ಇಂತಹ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಆದರೆ ಈಗ ಬಂದ್ ಮಾಡುವುದು ಅನಿವಾರ್ಯವಾಗಿದೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರವೇ ಗಂಜಿ ಕೇಂದ್ರ ಸ್ಥಾಪಿಸಬೇಕಾದ ಪರಿಸ್ಥಿತಿ ಬಂದರೂ ಬರಬಹುದು. ಆದರೆ ಅಲ್ಲೂ ಜನ ಸೇರುವಂತಿಲ್ಲ! ಎಂಥಾ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದಕ್ಕೆ ಇದುವೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ