ಕೊರೋನಾ ಭೀತಿ: ದಿನಸಿ ಹಂಚುವ ಕೆಲಸ ಶುರು ಮಾಡಿದ ಕ್ರಿಕೆಟಿಗ ಶಾಹಿದ್ ಅಫ್ರಿದಿ

ಸೋಮವಾರ, 23 ಮಾರ್ಚ್ 2020 (11:00 IST)
ಇಸ್ಲಾಮಾಬಾದ್: ಕೊರೋನಾ ವೈರಸ್ ಮಹಾಮಾರಿ ಪಾಕಿಸ್ತಾನದಲ್ಲೂ ತಾಂಡವವಾಡುತ್ತಿದೆ. ಇದರಿಂದಾಗಿ ದಿನಗೂಲಿ ನಂಬಿದ ಕಾರ್ಮಿಕರ ಬದುಕು ಹೀನಾಯವಾಗಿದೆ. ಇಂತಹ ಬಡವರ ನೆರವಿಗೆ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಧಾವಿಸಿದ್ದಾರೆ.


ಕೊರೋನಾದಿಂದಾಗಿ ದುಡಿಮೆಯಿಲ್ಲದೇ ನಿತ್ಯದ ಊಟಕ್ಕಾಗಿ ಪರದಾಡುತ್ತಿರುವ ಕುಟುಂಬಗಳಿಗೆ ದಿನಸಿ ಪೂರೈಸುವ ಕೆಲಸಕ್ಕೆ ಅಫ್ರಿದಿ ಮುಂದಾಗಿದ್ದಾರೆ.

ಅಗತ್ಯ ವಸ್ತುಗಳಾದ ಸ್ಯಾನಿಟೈಸರ್, ಮಾಸ್ಕ್, ದಿನಸಿ ಸಾಮಾನುಗಳನ್ನು ಪೂರೈಸಬೇಕೆಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕರೆಯನ್ನೂ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ