ರಾಜ್ಯಕ್ಕೆ ಕಾಲಿಟ್ಟ ಕೊರೊನಾ ವೈರಸ್ ; ಪ್ರತ್ಯೇಕ ವಾರ್ಡ್ ಸಿದ್ಧ

ಮಂಗಳವಾರ, 3 ಮಾರ್ಚ್ 2020 (14:03 IST)
ಕೊರೊನಾ ವೈರಸ್ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ಸಜ್ಜಗೊಳಿಸಲಾಗಿದೆ.

 ಕೊರೋನಾ ವೈರಸ್ ಸೋಂಕಿತರು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನ್ನು ಸಜ್ಜುಗೊಳಿಸಲಾಗಿದೆ.

ರಾಜ್ಯಕ್ಕೂ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಬಂದು ಹೋಗಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಇಂತಹ ರೋಗಿಗಳು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲೆಂದು ಪ್ರತ್ಯೇಕ ವಾರ್ಡ್ ಮತ್ತು ಸಿಬ್ಬಂದಿ ಸಜ್ಜುಗೊಳಿಸಿಕೊಂಡು ಇರಲು ಸೂಚಿಸಿದೆ.

ವಿಮ್ಸ್ ಆಸ್ಪತ್ರೆಯಲ್ಲೂ 8 ಜನರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತಹ ವಾರ್ಡ್ ನ್ನು ಸಿದ್ದಗೊಳಿಸಿದ್ದು, ಅದನ್ನು ವಿಮ್ಸ್ ನಿರ್ದೇಶಕ ಡಾ. ದೇವಾನಂದ್ ಮತ್ತು ಅಧೀಕ್ಷಕ ಡಾ. ಮರಿರಾಜ್ ಹೂಗಾರ್ ಪರಿಶೀಲನೆ ನಡೆಸಿದರು.

ಕೊರೊನಾ ರೋಗದ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇತರೇ ವೈರಸ್ ರೋಗಗಳಂತೆ ಅದು. ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು ಮತ್ತು ರೋಗಿಯಿಂದ ಇತರರು ಅಂತರ ಕಾಯ್ದುಕೊಳ್ಳಬೇಕೆಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ