ಬೆಂಗಳೂರಿನ ಗೂಗಲ್ ಕಂಪೆನಿಗೂ ತಟ್ಟಿದ ಕೊರೊನಾ ಸೋಂಕು

ಶುಕ್ರವಾರ, 13 ಮಾರ್ಚ್ 2020 (11:16 IST)
ಬೆಂಗಳೂರು : ಚೀನಾದಲ್ಲಿ ಮಾರಣಹೋಮ ನಡೆಸಿದ ಕೊರನಾ ವೈರಸ್ ಇದೀಗ ಭಾರತಕ್ಕೆ ಕಾಲಿಟ್ಟಿದ್ದು, ಈಗಾಗಲೇ ಒಂದು ಬಲಿ ತೆಗೆದುಕೊಂಡಿದೆ.

ಈಗಾಗಲೇ ಕರ್ನಾಟಕದಲ್ಲಿ 5 ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, 1 ಸಾವು ಕೂಡ ಸಂಭವಿಸಿದೆ. ಇದೀಗ ಬೆಂಗಳೂರಿನ ಗೂಗಲ್ ಕಂಪೆನಿಯ ಸಿಬ್ಬಂದಿಗೂ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

 

ಆದಕಾರಣ ಬೆಂಗಳೂರಿನಲ್ಲಿರೋ ಗೂಗಲ್ ಇಂಡಿಯಾ ಕಂಪೆನಿ ತನ್ನ  ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಗೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ