ಭಾರತ-ದ.ಆಫ್ರಿಕಾ ಮುಂದಿನ ಪಂದ್ಯಗಳಿಗೆ ವೀಕ್ಷಕರೇ ಇರೋದಿಲ್ಲ!

ಶುಕ್ರವಾರ, 13 ಮಾರ್ಚ್ 2020 (10:19 IST)
ಮುಂಬೈ: ಕೊರೋನಾ ವೈರಸ್ ಭೀತಿಯಿಂದಾಗಿ ದೇಶದಲ್ಲಿ ಅನೇಕ ಟೂರ್ನಿಗಳು ಅನಿಶ್ಚಿತತೆಯಲ್ಲಿದ್ದರೆ, ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಉಳಿದ ಪಂದ್ಯಗಳನ್ನು ವೀಕ್ಷಕರೇ ಇರಲ್ಲ.


ಮುಂದಿನ ಎರಡು ಪಂದ್ಯಗಳು ಕೋಲ್ಕೊತ್ತಾ ಮತ್ತು ಲಕ್ನೋದಲ್ಲಿ ನಡೆಯಲಿದೆ. ಆದರೆ ಈ ಎರಡೂ ಪಂದ್ಯಗಳನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಖಾಲಿ ಮೈದಾನದಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆ ನಡೆದ ಬಿಸಿಸಿಐ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ