ಕಳ್ಳತನ ಆರೋಪಿಗೆ ಕೊರೊನಾ : ಪೊಲೀಸರು, ಜೈಲು ಸಿಬ್ಬಂದಿ ಪಾಡೇನು?
ಕಳ್ಳತನ ಕೇಸ್ ನಲ್ಲಿನ ಆರೋಪದ ಮೇಲೆ ಬಂಧಿಸಿದ್ದ ಆರೋಪಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಆರೋಪಿಯನ್ನು ಕರೆತರುವಾಗ ಪೊಲೀಸರು ಪಿಪಿಇ ಕಿಟ್ ಧರಿಸಿ, ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು.
ಸಬ್ ಜೈಲ್‌ನಲ್ಲಿದ್ದ ಎಲ್ಲಾ ಆರೋಪಿಗಳನ್ನು ಪ್ರತ್ಯೇಕ ಸೇಲ್ ನಲ್ಲಿಡಲಾಗಿದೆ. ಮುನ್ನೆಚ್ಚರಿಕೆಯಾಗಿ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದಿದ್ದಾರೆ.