ರಾಜ್ಯವನ್ನು ಸಾಲದಲ್ಲಿ ಮುಳುಗಿಸ್ತಿದಾರೆ- ವಿಜಯೇಂದ್ರ

ಗುರುವಾರ, 10 ಆಗಸ್ಟ್ 2023 (14:53 IST)
ಪಾಲಿಕೆ ಗುತ್ತಿಗೆದಾರರಿಂದ ಕಮೀಷನ್ ಆರೋಪ ವಿಚಾರವಾಗಿ ಶಾಸಕ ಬಿ ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
 
ಕಾಂಗ್ರೆಸ್ ನವ್ರು ಭ್ರಷ್ಟಾಚಾರ ಬಗ್ಗೆ ಮಾತಾಡ್ತಾರೆ ಅಂದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ,ಈಗ ಅವರದ್ದೇ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬರ್ತಿದೆ.ಈ ಸರ್ಕಾರ ಗ್ಯಾರಂಟಿಗಳಿಗೆ ಸಾಲ ಮಾಡ್ತಿದೆ.ರಾಜ್ಯವನ್ನು ಸಾಲದಲ್ಲಿ ಮುಳುಗಿಸ್ತಿದಾರೆ.ಮುಂದೆ 80-90 ಸಾವಿರ ಕೋಟಿ ಸಾಲ ಮಾಡುವ ಪರಿಸ್ಥಿತಿ ಉದ್ಭವ ಆಗುತ್ತೆ.ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್‌ನವರಿಗೆ ಚಿಂತೆ ಇಲ್ಲ.ಕೇಂದ್ರದ ಕಾಂಗ್ರೆಸ್ ಗೆ ಈ ಸರ್ಕಾರ ಎಟಿಎಂ ಆಗಿದೆ.ಮುಂದಿನ ಲೋಕ ಸಭೆ ಚುನಾವಣೆ ದೃಷ್ಟಿಯಿಂದ ಹಣ ಸಂಗ್ರಹ ಮಾಡ್ತಿದಾರೆ.ತಮ್ಮ‌ ಜೇಬನ್ನು ತುಂಬಿಸಿಕೊಳ್ಳುವ ಕಡೆ ಗಮನ ಕೊಟ್ಟಿದ್ದಾರೆ, ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ.
 
ಈ ಸರ್ಕಾರ ಬಂದು ಮೂರು ತಿಂಗಳಗಾಗಿದೆ.ಗುತ್ತಿಗೆದಾರರು ಮೂರ್ನಾಲ್ಕು ಮಂತ್ರಿಗಳ ಮೇಲೆಯೇ ನೇರವಾಗಿ ಕಮೀಷನ್ ಆರೋಪ ಮಾಡ್ತಿದಾರೆ.ಗ್ಯಾರಂಟಿ ಕೊಡ್ತೀವಿ ಅಂತ ಜನರ ಕಿವಿ ಮೇಲೆ ಹೂ ಇಟ್ಟು ಅಧಿಕಾರ ಪಡೆದ್ರು.ಈಗ ಜನರಿಗೆ ಮೋಸ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದಾರೆ.ಎರಡು ಮೂರು ತಿಂಗಳಲ್ಲೇ ಈ ಪರಿಸ್ಥಿತಿ ಬಂದಿದೆ ಮುಂದೆ ಇನ್ಯಾವ ಪರಿಸ್ಥಿತಿ ಬರುತ್ತೆ ಅಂತ ಕಾದು ನೋಡಿ ಅಂತಾ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ