ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ; ದಾಳಿ ಮಾಡಿ ಕುಳ ಹಿಡಿದ ಎಸಿಬಿ

ಸೋಮವಾರ, 6 ಮೇ 2019 (18:46 IST)
ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ ಇಬ್ಬರು ಅಧಿಕಾರಿಗಳು.
ಪ್ರತ್ಯೇಕ ಪ್ರಕರಣಗಳಲ್ಲಿ ಮುದ್ದೇಬಿಹಾಳ ಭೂ ದಾಖಲೆ ಇಲಾಖೆ ಅಧಿಕಾರಿ ಹಾಗೂ ವಿಜಯಪುರ ಜಿಲ್ಲೆಯ  ಬಸವನ ಬಾಗೇವಾಡಿಯ ತಹಶೀಲ್ದಾರ್ ಕಚೇರಿಯ ಎಫ್.ಡಿ.ಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮುದ್ದೇಬಿಹಾಳ ಭೂ ದಾಖಲೆ ವಿಭಾಗದ ಅಧಿಕಾರಿ ದೇವಾನಂದ ರಾಠೋಡ ಎವಿಬಿ ಬಲೆಗೆ ಬಿದ್ದಿದ್ದಾರೆ.
ಜಮೀನು ನಕ್ಷೆ ನೀಡಲು ಪಾಂಡುರಂಗ ಕುಲಕರ್ಣಿ ಎಂಬುವರಿಂದ 2 ಸಾವಿರ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಬಾಡಿಗೆ ಮನೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದ ಅಧಿಕಾರಿ ಇವರಾಗಿದ್ದಾರೆ.

ಇನ್ನು ಬಸವನ ಬಾಗೇವಾಡಿ ತಹಶೀಲ್ದಾರ್ ಕಚೇರಿಯ ಎಫ್.ಡಿ.ಸಿ ಹುಡೇದ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೃಷಿ ಜಮೀನು ಎನ್.ಎ ಮಾಡಿ‌ ಕೊಡಲು 5 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಲುಕಿದ್ದಾರೆ. 19 ಗುಂಟೆ ಜಮೀನು ಎನ್.ಎ ಮಾಡಿ ಕೊಡಲು ಲಂಚ ಕೇಳಿದ್ದರು ಹುಡೇದ್.

ವಿಜಯಪುರ ನಗರದ ಹೊರವಲಯದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ ಎಫ್.ಡಿ.ಸಿ.

ಎಸಿಬಿ ಡಿಎಸ್ಪಿ ರಘು ನೇತೃತ್ವದಲ್ಲಿ ಎಸಿಬಿ ಇನ್ಸಪೆಕ್ಟರ್ ಗಣಾಚಾರಿ ಹಾಗೂ ಚಲುವಾದಿ ನಡೆಸಿದ ಕಾರ್ಯಾಚರಣೆ ಇದಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ