ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಕಾಟನ್ ಗೋಡೌನ್
ವಾಸದ ಮನೆಯ ಕೆಳಗಿದ್ದ ಕಾಟನ್ ಗೋಡಾನ್‌ಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಹಾಸನ ನಗರದ, 80 ಅಡಿ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಕಾಟನ್ ಗೋಡಾನ್ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಇದು ಯಶೋಧ ಎಂಬುವವರಿಗೆ ಸೇರಿದ ಕಟ್ಟಡವಾಗಿದ್ದು, ಬೆಂಕಿ ಕೆನ್ನಾಲಿಗೆಗೆ ಇಡೀ ಕಟ್ಟಡ ಬಿರುಕು ಬಿಟ್ಟಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಗೋಡಾನ್ನಿಂದ ಹೊರ ಓಡಿ ಬಂದಿದ್ರಿಂದ ಭಾರಿ ಅನಾಹುತ ತಪ್ಪಿದೆ. ಈ ಕಟ್ಟಡದ ಮೇಲ್ಬಾಗದಲ್ಲಿ ಮಾಲೀಕರ ಕುಟುಂಬ ವಾಸವಿತ್ತು. ಕಟ್ಟಡದ ನೆಲಮಳಿಗೆಯಲ್ಲಿ ಕಾಟನ್ ಗೋಡಾನ್ ಇತ್ತು. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಪೆನ್‌ಷನ್‌ಮೊಹಲ್ಲಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.