ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ ಕೌಂಟ್ ಡೌನ್

ಶುಕ್ರವಾರ, 4 ಆಗಸ್ಟ್ 2023 (18:23 IST)
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಹಿನ್ನಲೆ 12 ದಿನಗಳ ಕಾಲ   ತೋಟಗಾರಿಕೆ ಇಲಾಖೆ ಆಯೋಜನೆ ಮಾಡಿದೆ.ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹತ್ತು ಲಕ್ಷ ಮಂದಿ ಆಗಮನ ನಿರೀಕ್ಷೆ ಇದೆ.ಹೀಗಾಗಿ ಸಂಚಾರ ದಟ್ಟಣೆಯಾಗದಂತೆ ಸಂಚಾರಿ ಪೊಲೀಸ್ ರಿಂದ ಮಾರ್ಗಸೂಚಿ ಹೊರಡಿಸಲಾಗಿದೆ.ಸಂಚಾರಿ ಪೊಲೀಸ್ರಿಂದ ವಾಹನಗಳ ನಿಲುಗಡೆಗೆ ಅವಕಾಶ ಮತ್ತು ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿದೆ.
 
ವಾಹನ ನಿಲುಗಡೆಗೆ ಅವಕಾಶವಿರೋ ಸ್ಥಳ
 
ಡಾ.ಮರೀಗೌಡ ರೋಡ್, ಆಲ್ ಅಮೀನ್ ಕಾಲೇಜು ಅವರಣ,,ಕೆ ಹೆಚ್ ರೋಡ್ ಶಾಂತಿನಗರ ಬಸ್ ನಿಲ್ದಾಣ,, ಮರಿಗೌಡ ರೋಡ್ ಬೈಕ್ ಮತ್ತು ಕಾರ್ ಪಾರ್ಕಿಂಗ್ ವ್ಯವಸ್ಥೆ.. ಜೆಸಿ ರೋಡ್ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳ
 
ವಾಹನ ನಿಲುಗಡೆಗೆ ನಿಷೇಧ ಸ್ಥಳ
 
ಮರಿಗೌಡ ರೋಡ್ ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗೆ ಎರಡು ರಸ್ತೆ ಬದಿ ವಾಹನ ನಿಲುಗಡೆ ನಿಷೇಧ..ಕೆ ಎಚ್ ರೋಡ್ ನಿಂದ  ಶಾಂತಿ ನಗರ ಬಸ್ ನಿಲ್ದಾಣವರೆಗೂ ನಿಲ್ಲಿಸುವಂತಿಲ್ಲ..ಸಿದ್ದಯ್ಯ ರೋಡ್,ಊರ್ವಶಿ ಥೀಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ ವರೆಗೂ ಅವಕಾಶವಿಲ್ಲ.ಅಶೋಕ ಪಿಲ್ಲರದ ನಿಂದ ಸಿದ್ದಾಪುರ ಜಂಕ್ಷನ್ ವರೆಗೂ ..ಆರ್ ವಿ ಟೀಚರ್ಸ್ ಕಾಲೇಜ್ ನಿಂದ ಆಶೋಕ್ ಪಿಲ್ಲರ್ ವರೆಗೂ ವಾಹನ ನಿಲುಗಡೆಗೆ ಅವಕಾಶವಿಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ