ಮತ್ತೆ ಶತಕ ದಾಟಿದ ಕೋವಿಡ್ ಪ್ರಕರಣಗಳು!

ಶುಕ್ರವಾರ, 29 ಏಪ್ರಿಲ್ 2022 (11:30 IST)
ಬೆಂಗಳೂರು :  ನಗರದಲ್ಲಿ  ಗುರುವಾರ 142 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ರಾಜ್ಯದ ದೈನಂದಿನ ಪ್ರಕರಣಗಳಲ್ಲಿ ಶೇ. 90 ಕ್ಕಿಂತ ಬೆಂಗಳೂರಿನಲ್ಲೇ ದೃಢಪಟ್ಟಿದೆ.
 
ಕೋವಿಡ್ನಿಂದ ಸಾವಿನ ವರದಿಯಾಗಿಲ್ಲ.109 ಮಂದಿ ಚೇತರಿಸಿಕೊಂಡಿದ್ದಾರೆ. 1,681 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 6 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಂಟಿಲೇಟರ್ ಸಹಿತ ತೀವ್ರ ನಿಗಾ ವಿಭಾಗದಲ್ಲಿ ಯಾರೂ ಇಲ್ಲ. ತೀವ್ರ ನಿಗಾ ವಿಭಾಗ ಮತ್ತು ಆಮ್ಲಜನಕಯುಕ್ತ ಹಾಸಿಗೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ವಾರ್ಡ್ನಲ್ಲಿ ಬುಧವಾರ ಇಬ್ಬರು ದಾಖಲಾಗಿದ್ದರೆ, ಗುರುವಾರ ಈ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ನಗರದಲ್ಲಿ 3,933 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವಿಟಿ ದರ ಶೇ.2.76 ದಾಖಲಾಗಿದೆ. ಗರಿಷ್ಠ ಪಾಸಿಟಿವಿಟಿ ದರ ದಾಸರಹಳ್ಳಿಯಲ್ಲಿ ಶೇ.5.92 ದಾಖಲಾಗಿದೆ. ಉಳಿದಂತೆ ಮಹದೇವಪುರದಲ್ಲಿ ಶೇ.5.02 ಪಾಸಿಟಿವಿಟಿ ಬಂದಿದೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 940 ಪರೀಕ್ಷೆ ನಡೆದಿದ್ದು, ಕನಿಷ್ಠ ಪಾಸಿಟಿವಿಟಿ ದರ ಶೇ.1.38 ವರದಿಯಾಗಿದೆ.

ದಾಸರಹಳ್ಳಿ, ಆರ್.ಆರ್.ನಗರ ತಲಾ 3, ಮಹಾದೇವಪುರ 27, ಬೊಮ್ಮನಹಳ್ಳಿ 12, ಬೆಂಗಳೂರು ಪೂರ್ವ 16, ಯಲಹಂಕ 4, ಬೆಂಗಳೂರು ಪಶ್ಚಿಮ 7 ಮತ್ತು ಬೆಂಗಳೂರು ದಕ್ಷಿಣದಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ