ಪೊನ್ನಂಪೇಟೆ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಿಗೆ ಕೋವಿಡ್ ಸೋಂಕು

ಬುಧವಾರ, 22 ಡಿಸೆಂಬರ್ 2021 (20:43 IST)
ಡಿ.22 ಪದವಿಪೂರ್ವ ‌ಕಾಲೇಜಿನಲ್ಲಿ  ಪ್ರಾಧ್ಯಾಪಕರೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಇಂದು  ವಿಧ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ.  
   ಇಲ್ಲಿ ಗೊಂದಲ ಏನೆಂದರೆ ಪ್ರಾಧ್ಯಾಪಕರೊಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಕ್ಕಳಿಗೆ ರಜೆ ನೀಡುವುದು ಪರಿಹಾರವೆ ಎಂಬುದಾಗಿದೆ?
  ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡದೆ ಹೀಗೆ ಕಳುಹಿಸಿದರೆ ಮುಂದೆ ಆಗಲಿರುವ ಅಪಾಯಕ್ಕೆ ಯಾರು ಹೊಣೆ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.
  ವಿದ್ಯಾರ್ಥಿಗಳ ಪೋಷಕರಲ್ಲಿ ಈ ಪ್ರಕರಣ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಶಾಲೆಯಲ್ಲೇ ವಿಧ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಏರ್ಪಡಿಸಬೇಕಾಗಿತ್ತು. ಅದರ ಬದಲು ಈ ದಿಢೀರ್ ರಜೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಇಂದು ಒಂದು ದಿನ ರಜೆ ಘೋಷಣೆಮಾಡಿದ್ದು. ನಾಳೆ ಏನೂ? ಎನ್ನುವ ಗೊಂದಲ ವಿಧ್ಯಾರ್ಥಿಗಳಲ್ಲೂ, ಪೋಷಕರಲ್ಲೂ ಇದೆ.
 ಈ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗು ಪೊಷಕರು ಒತ್ತಾಯಿಸುತ್ತಿದ್ದಾರೆ. ಮುಂದಾಗುವ ಅಪಾಯವನ್ನು ತಡೆಯಲ್ಲು ಶೀಘ್ರಕ್ರಮ ಅಗತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ