ಪ್ರತಿಷ್ಠಿತ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು , ಟೆಕ್ಕಿಗಳಿಗೆ ಮಾದಕ ವಸ್ತು ಮಾರಾಟ

ಗುರುವಾರ, 16 ಡಿಸೆಂಬರ್ 2021 (22:09 IST)
ಪ್ರತಿಷ್ಠಿತಿ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಗೋವಿಂದಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ನೈಜೀರಿಯಾ ಮೂಲದ ಒಕೇಚುಕು ಬಂಧಿತ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 260 ಗ್ರಾಂ ಎಂಡಿಎಂಎ ಕ್ರಿಶ್ಟಲ್, 110 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಹಾಲಿನ ಪೌಡರ್ ಡಬ್ಬದಲ್ಲಿ ಸಾಗಟ:
ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಯಾರಿಗೂ ಅನುಮಾನ ಬಾರದಿರಲ್ಲಿ ಎಂದು ಆರೋಪಿಯು ಅಮೂಲ್ ಹಾಲಿನ ಪೌಡರ್ ಡಬ್ಬ ಹಾಗೂ ಪ್ಯಾಕೆಟ್‍ಗಳಲ್ಲಿ ಮಾದಕ ವಸ್ತುವನ್ನು ಇಟ್ಟು ಮಾರಾಟ ಮಾಡುತ್ತಿದ್ದ. ಹಾಗಾಗಿ, ಸರಾಗವಾಗಿ ಗ್ರಾಹಕರಿಗೆ ಮಾದಕ ವಸ್ತು ತಲುಪುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೆÇಲೀಸರು ದಾಳಿ ನಡೆಸಿ ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ