ನಗರದಲ್ಲಿ ಕಳೆದ ಏಳು ದಿನಗಳಲ್ಲಿ ಕೋವಿಡ್ ಸೋಂಕು ಪ್ರಕರಣ ಏರಿಕೆ

ಶುಕ್ರವಾರ, 29 ಏಪ್ರಿಲ್ 2022 (20:03 IST)
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆ, ಕಳೆದ ಏಳು ದಿನಗಳಲ್ಲಿ 675 ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.
 
ಹಲವು ದಿನಗಳಿಂದ ತೀವ್ರ ತಗ್ಗಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ನಾಲೈದು ದಿನಗಳಿಂದ ಮತ್ತೆ ಕೊಂಚ ಏರಿಕೆಯಾಗುತ್ತಿವೆ. ಕಳೆದ ಏಳು ದಿನಗಳಿಂದ ಬದಲಾವಣೆ ಕಂಡು ಬಂದಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಬಿಎಂಪಿ ತಿಳಿಸಿದೆ.
 
ಒಂದೇ ದಿನದಲ್ಲಿ 142 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ, ಕಳೆದ ಏಳು ದಿನಗಳಲ್ಲಿ 675 ಪ್ರಕರಣಗಳು ಪತ್ತೆಯಾಗಿದ್ದಾರೆ. ಈ ಪೈಕಿ ಪುರುಷರೇ ಹೆಚ್ಚು ಕೋವಿಡ್ ಪೀಡಿತರಾಗಿದ್ದಾರೆ. ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,681 ಇರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ. 
 
468 ಮಂದಿ ಗುಣಮುಖ:
 
ಪ್ರಮುಖವಾಗಿ ಸೋಂಕು ಹೆಚ್ಚಳವಾದರೂ, ಸಾವಿನ ಪ್ರಕರಣಗಳು ಎಲ್ಲೂ ಬೆಳಕಿಗೆ ಬಂದಿಲ್ಲ. ಅದೇ ರೀತಿ, 468 ಮಂದಿ ಈ ಏಳು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ ಎಂದು ಸಮಾಧಾನ ತಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ