ನಗರದಲ್ಲಿ ಡ್ರೈ ಫ್ರೂಟ್ಸ್ ಗೆ ಹೆಚ್ಚಿದ ಡಿಮ್ಯಾಂಡ್

ಭಾನುವಾರ, 24 ಏಪ್ರಿಲ್ 2022 (20:23 IST)
ರಾಜ್ಯದಲ್ಲಿ ರಂಜಾನ್ ಹಬ್ಬದ ಉಪವಾಸ ಪ್ರಾರಂಭವಾಗಿದ್ದು, ಮುಸ್ಲಿಂ ಸಮುದಾಯದವರು ಡ್ರೈ ಫ್ರೂಟ್ಸ್ ಮತ್ತು ಸಿಹಿ ತಿಂಡಿಗಳ ಖರೀದಿಗೆ ತೋಡಗಿದ್ದಾರೆ. ನಗರದ ರೆಸಾಲ್ ಮಾರ್ಕೆಟ್ , ಕೆ ಆರ್ ಮಾರ್ಕೆಟ್ , ಜಯನಗರ, ಸೇರಿದಂತೆ ಪ್ರಮುಖ ಏರಿಯಾಗಳಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಜೋರಾಗಿದೆ. ಅರಬ್ ದೇಶಗಳು, ಮೆಕ್ಕಾ-ಮದೀಮ, ಜೋರ್ಡನ್, ಇರಾನ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ಕಡೆಯಿಂದ ಒಣ ಹಣ್ಣುಗಳು ಆಗಮಿಸುತ್ತಿದ್ದು ಮಾರುಕಟ್ಟೆಯಲ್ಲಂತೂ ವ್ಯಾಪಾರ-ವಹಿವಾಟು ಜೋರಾಗಿದೆ. ಇನ್ನು ಡ್ರೈ ಫ್ರೂಟ್ಸ್ ನ್ನ ಕೊಳ್ಳಲು ನೂರಾರು ಜನರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.ಮುಸ್ಲಿಂ ಸಮುದಾಯದವರು ಉಪವಾಸ ಸಂದರ್ಭದಲ್ಲಿ ಸುರ್ಯೋದಕ್ಕೂ ಮುನ್ನ ಮತ್ತು ಸೂರ್ಯಸ್ತದ ನಂತರ ಮಾತ್ರ ಆಹಾರ ಸೇವಿಸುತ್ತಾರೆ. ಉಪವಾಸ ಬೀಡುವಂತಹ ಸಂದರ್ಭದಲ್ಲಿಯೂ ಖರ್ಜೂರ ಸೇವನೆ ಮಾಡುವುದು ಹೆಚ್ಚು . ಹಾಗಾಗಿ ಖರ್ಜೂರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ಅಲ್ಲದೆ ಖರ್ಜುರ ದೇಹಕ್ಕೆ ತುಂಬ ಒಳ್ಳೆಯದ್ದು.  ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತೆ. ಹೀಗಾಗಿ ಖರ್ಜುರವನ್ನ ಜನರು ಹೆಚ್ಚಿಗೆ ಖರೀದಿ ಮಾಡ್ತಿದ್ದಾರೆ. ದ್ರಾಕ್ಷಿ, ಬಾದಾಮಿ, ಖರ್ಜೂರ, ಒಣದ್ರಾಕ್ಷಿ, ಪಿಸ್ತಾ, ಶಾವಿ,ಕಾಜು ಇನ್ನಿತರೆ ಒಣ ಹಣ್ಣುಗಳ ವ್ಯಾಪಾರ ನಡೆಯುತ್ತಿದೆ.ರಂಜಾನ್ ಪ್ರಯುಕ್ತ ಡ್ರೈಫ್ರೂಟ್ಸ್ ಗಳನ್ನ ಆಫರ್ ಗಳಲ್ಲಿ ಮಾರಾಟ ಮಾಡಲಾಗ್ತಿದೆ. 1500 ಸಾವಿರ ಇರುವುದನ್ನ 1000 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗ್ತಿದೆ.ರಂಜಾನ್ ಪ್ರಯುಕ್ತ ಜನರ ಖರೀದಿ ಭರಾಟೆ ಜೋರಾಗಿದ್ದು. ಒಂದು ತಿಂಗಳು ಇರುವ ಹಬ್ಬಕ್ಕೆ ಈಗಾಲಿಂದಲ್ಲೇ ಖರೀದಿ ಮಾಡ್ತಿದ್ದಾರೆ. ಡ್ರೈ ಫ್ರೂಟ್ಸ್ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದ್ದು ಎಂದು ಕೊಂಡುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು. ಈಗ ನಿನ್ನೆಯಿಂದ ರಂಜಾನ್ ಉಪವಾಸ ಶುರುವಾದಗಲಿಂದ ಡ್ರೈ ಫ್ರೂಟ್ಸ್ ಗೆ ಬಾರಿ ಬೇಡಿಕೆ ಶುರುವಾಗಿದೆ. ಹಾಗಾಗಿ ಜನರು ಮುಂಚಿತವಾಗಿ ಡ್ರೈ ಫ್ರೂಟ್ಸ್ ಕೊಳ್ತಿದ್ದಾರೆ. ಡ್ರೈ ಫ್ರೂಟ್ಸ್ ಗಳಲ್ಲಿ ಖರ್ಜುರಕ್ಕಂತೂ ತುಂಬ ಬೇಡಿಕೆ . ಸೋ ಡ್ರೈ ಫ್ರೂಟ್ಸ್ ಗಳಲ್ಲಿ ಖರ್ಜೂರವನ್ನೇ ಜನ ಹೆಚ್ಚೆಚ್ಚು ಕೊಳ್ತಿದ್ದಾರೆ. ಹಬ್ಬಕ್ಕೆ ಡ್ರೈ ಫ್ರೂಟ್ಸ್ ಗಳ ಬೆಲೆ ಕೂಡ ಜನರ ಕೈಗೆಟ್ಟಕುವ ದರದಲ್ಲಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ