ಅಟಲ್ ಸೇತು ರಸ್ತೆಯಲ್ಲಿ ಬಿರುಕು: ಪ್ರಧಾನಿ ಮೋದಿನ ಕಾಲೆಳೆದ ಕಾಂಗ್ರೆಸ್

Sampriya

ಭಾನುವಾರ, 23 ಜೂನ್ 2024 (17:52 IST)
Photo Courtesy X
ಬೆಂಗಳೂರು: ಇದೇ 2024ರ ಜನವರಿ 12ರಂದು ಉದ್ಘಾಟನೆಯಾಗಿದ್ದ ಅರ್ಥಾತ್ ಪ್ರಧಾನಿ ಮೋದಿಯವರು ಫೋಟೋಶೂಟ್ ಮಾಡಿಸಿದ್ದ ಅಟಲ್ ಸೇತುವೆಯ ರಸ್ತೆ ಕೇವಲ 6 ತಿಂಗಳಲ್ಲೇ ಬಿರುಕು ಬಿಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಟ್ರೋಲ್ ಮಾಡಿದೆ.

ದೇಶದ ಅತಿ ಉದ್ದದ ಸಮುದ್ರ ಸೇತು ಎಂದು ಹೇಳುವ 'ಅಟಲ್ ಸೇತು' ಉದ್ಘಾಟನೆಗೊಂಡು ಐದೇ ತಿಂಗಳಲ್ಲಿ ಬಿರುಕು ಬಿಟ್ಟಿದ್ದು, ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.

17 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯನ್ನು ಜನವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಇದೀಗ ರಸ್ತೆಯಲ್ಲಿ ಬಿರುಕು ಕಂಡಿರುವುದನ್ನು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.  

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಇದೇ 2024ರ ಜನವರಿ 12ರಂದು ಉದ್ಘಾಟನೆಯಾಗಿದ್ದ ಅರ್ಥಾತ್ ಪ್ರಧಾನಿ ಮೋದಿಯವರು ಫೋಟೋಶೂಟ್ ಮಾಡಿಸಿದ್ದ ಅಟಲ್ ಸೇತುವೆಯ ರಸ್ತೆ ಕೇವಲ 6 ತಿಂಗಳಲ್ಲೇ ಬಿರುಕು ಬಿಟ್ಟಿದೆ.

ದುಬಾರಿ ಟೋಲ್ ಶುಲ್ಕ ಪಾವತಿಸಿ ಈ ಸೇತುವೆಯನ್ನು ನಂಬಿಕೊಂಡು ಜನ ಓಡಾಡುವುದು ಸುರಕ್ಷಿತವೇ!

ಅಂದಹಾಗೆ, ಮೋದಿಯವರ ಫೋಟೋಶೂಟ್ ಮಾಡಿಸಿದ್ದ ಈ ಸೇತುವೆಗೆ 18,000 ಕೋಟಿ ವೆಚ್ಚವಾಗಿದೆ, ಇಷ್ಟು ದೊಡ್ಡ ಮೊತ್ತದ ಹಣಕ್ಕೆ ಈಗ ಹೊಣೆಗಾರರು ಯಾರು ಎಂದು ಪ್ರಶ್ನಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ