ಟ್ರಾಫಿಕ್ ನಲ್ಲಿ ಪರದಾಡಿದ ಅಂಬ್ಯುಲೆನ್ಸ್

ಶನಿವಾರ, 26 ಅಕ್ಟೋಬರ್ 2019 (18:30 IST)
ಟ್ರಾಫಿಕ್ ನಲ್ಲಿ ಅಂಬ್ಯುಲೆನ್ಸ್ ವೊಂದು ಸಿಲುಕಿ ಪರದಾಡಿದ ಘಟನೆ ನಡೆದಿದೆ.
 

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಟ್ರಾಪಿಕ್ ಸಮಸ್ಯೆ ಮೀತಿಮಿರಿ ಬೆಳೆಯುತ್ತಿದ್ದು, ವಾಹನ ದಟ್ಟಣೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಅಲ್ಲದೇ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೊಪ್ಪಿಕರ ರೋಡಿನಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಅಂಬ್ಯುಲೆನ್ಸ್ ಮಾರ್ಗ ಮಧ್ಯದಲ್ಲಿ ಪರದಾಡಿದೆ.

ಎರಡು ಬದಿಯಿಂದ ಬರುವ ವಾಹನಗಳ ಮಧ್ಯೆ ನುಸುಳಿಕೊಂಡು ಹೋಗುವಲ್ಲಿ ಅಂಬ್ಯುಲೆನ್ಸ್ ಪರದಾಡಿದ ಸ್ಥಿತಿ ವಿಡಿಯೋದಲ್ಲಿ ಸೆರೆಯಾಗಿದೆ.

ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವಾಹನಗಳು ಸಂಕಷ್ಟಕ್ಕೆ ಸಿಲುಕುವಂತಹ  ಸ್ಥಿತಿ ನಿರ್ಮಾಣವಾಗಿದೆ.

ಜನತೆ ಬೆಂಗಳೂರಿನ ಟ್ರಾಫಿಕ್ ನೋಡಿ ಹುಬ್ಬಳ್ಳಿ ಟ್ರಾಫಿಕ್ ತುಂಬಾ ಕಡಿಮೆ ಎಂದು ಹೇಳುತ್ತಿದ್ದರು. ಆದರೇ ಪ್ರಸ್ತುತ ದಿನಮಾನಗಳಲ್ಲಿ ಹುಬ್ಬಳ್ಳಿ -ಬೆಂಗಳೂರು ಮಹಾನಗರವನ್ನು ಟ್ರಾಫಿಕ್ ನಲ್ಲಿ ಹಿಂದಿಕ್ಕುವ ರೀತಿಯಲ್ಲಿ ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಆಸ್ಪತ್ರೆಗೆ ತೆರಳಬೇಕಿದ್ದ ಅಂಬ್ಯುಲೆನ್ಸ್ ಕೆಲಕಾಲ ಪರದಾಡಿದ ಸ್ಥಿತಿ ನಿಜಕ್ಕೂ ಮನಕಲುಕುವಂತಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ