ಕ್ರಿಕೆಟ್ ಬೆಟ್ಟಿಂಗ್ ದಂಧೆ: ಓರ್ವನನ್ನು ಬಂಧಿಸಿ 3 ಲಕ್ಷ ರೂ ವಶಕ್ಕೆ ಪಡೆದ ಸಿಸಿಬಿ
ಶನಿವಾರ, 13 ನವೆಂಬರ್ 2021 (21:47 IST)
fir
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಲಲಿತ್‌ಕುಮಾರ್ ಧಾರಿವಾಲ್ ಎಂದು ಬಂಧಿತ ಆರೋಪಿಯನ್ನು ಗುರುತಿಸಲಾಗಿದೆ.
ಬಂಧಿತ ಲಲಿತ್ ಕುಮಾರ್ ದಕ್ಷಿಣ ವಿಭಾಗದ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಪಾಕಿಸ್ತಾನ್-ಆಸ್ಟ್ರೇಲಿಯಾ ಹಾಗೂ ನಾಳೆ ನಡೆಯಲಿರುವ ಫೈನಲ್ ಟಿ20ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದ ಎನ್ನಲಾಗಿದೆ.
3 ಲಕ್ಷ ರೂ ನಗದು ವಶ:
ಬಂಧಿತನಿಂದ 3 ಲಕ್ಷ ರೂ ನಗದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆರೋಪಿಯ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.