ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿಶೀಟರ್ಸ್ ಮನೆಗಳ ಮೇಲೆ ರೇಡ್
ಭಾನುವಾರ, 7 ನವೆಂಬರ್ 2021 (20:34 IST)
ಬೆಂಗಳೂರು: ಭಾನುವಾರ ಬೆಳ್ಳಂ ಬೆಳಗ್ಗೆ ರೌಡಿಶೀಟರ್‌ಗೆ ಪೊಲೀಸರು ಶಾಕ್ ನೀಡಿದ್ದಾರೆ. ರೌಡಿಶೀಟರ್ಸ್ ಮನೆಗಳ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಬೆಳ್ಳಂಬೆಳಗ್ಗೆ ಓಪನ್ ಆಗಿದ್ದ ವೈನ್ ಶಾಪ್ ಮೇಲೂ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ರಾಜಧಾನಿ ಪಶ್ಚಿಮ ವಿಭಾಗದ ವಿಶೇಷ ಕಾರ್ಯಾಚರಣೆಗೆ ಕಾರಣವಾಗಿದೆ.
ನಗರದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ರೌಡಿಶೀಟರ್ಸ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಳಗ್ಗೆ 5 ಗಂಟೆಯಿಂದಲೇ ಪರಿಶೀಲನೆ ನಡೆಯುತ್ತಿದ್ದು ಕಾಟನ್ ಪೇಟೆ, ಚಾಮರಾಜಪೇಟೆ, ಜೆಜೆನಗರ ಸೇರಿ 6 ಠಾಣಾ ನಿರ್ಮಾಣ 180 ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 121ಕ್ಕೂ ಹೆಚ್ಚು ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.