ಸಮಾಧಿಯಲ್ಲಿದ್ದ ಶವ ತೆಗೆದು ಚಿನ್ನಾಭರಣ ಕದ್ದ ದುಷ್ಕರ್ಮಿಗಳು

ಮಂಗಳವಾರ, 24 ಅಕ್ಟೋಬರ್ 2017 (12:05 IST)
ಕಲಬುರ್ಗಿ: ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳವು ಮಾಡಿರುವ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.

ಪ್ರೇಮಾಬಾಯಿ ಡಗೆ(75) ವರ್ಷದ ಅಜ್ಜಿ ಐದು ದಿನದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಆಕೆಯ ಮೈಮೇಲಿದ್ದ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದರ ಮಾಹಿತಿ ತಿಳಿದಿದ್ದ ಪರಿಚಿತ ವ್ಯಕ್ತಿಗಳೇ ಈ ಕೃತ್ಯವೆಸಗರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ನಿನ್ನೆ ರಾತ್ರಿ ಸಮಾಧಿಯಿಂದ ಶವ ಹೊರತೆಗೆದು ಶವದ ಮೈಮೇಲಿದ್ದ 50 ಗ್ರಾಂ ಗೂ ಹೆಚ್ಚಿದ್ದ ಚಿನ್ನಾಭರಣ ದೋಚಿ, ಶವವನ್ನು ಹೊರಗೆ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ. ಬೆಳಗ್ಗೆ ಸಮಾಧಿ ಮೇಲೆ ಬಿದ್ದಿರುವ ಶವ ಕಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ