ಒಣಗುತ್ತಿರುವ ಬೆಳೆಗಳು, ಆತಂಕದಲ್ಲಿ ರೈತರು

ಬುಧವಾರ, 30 ಆಗಸ್ಟ್ 2023 (15:20 IST)
ಬೀದರ್​ ಜಿಲ್ಲೆಯಾದ್ಯಂತ ಬೆಳೆಗಳು ಒಣಗುತ್ತಿದ್ದು, ರೈತಸಮೂಹ ಆತಂಕದಲ್ಲಿದೆ. ಕಳೆದೊಂದು ತಿಂಗಳಿಂದ ಜಿಲ್ಲೆಯಾದ್ಯಂತ ಮಳೆ ಬಂದಿಲ್ಲ. ಇದರಿಂದ ಜಿಲ್ಲೆಯ ರೈತಾಪಿ ವರ್ಗಕ್ಕೆ ಬೆಳೆ ಹಾನಿ‌ ಭೀತಿ ಶುರುವಾಗಿದೆ. ಸೋಯಾ, ತೊಗರಿ ಬಿತ್ತಿದ ರೈತರಿಗೆ ಬೆಳೆ ಹಾನಿ ಭೀತಿ ಶುರುವಾಗಿದೆ. ಚಿಟಗುಪ್ಪಾ, ಔರಾದ್, ಹುಲಸೂರು, ಬೀದರ್ ತಾಲೂಕಿನಲ್ಲಿ ಬೆಳೆಹಾನಿ ಭೀತಿ ಹೆಚ್ಚುತ್ತಿದೆ. ಬರಗಾಲ ಜಿಲ್ಲೆ ಎಂದು ಘೋಷಿಸುವಂತೆ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆಗಸ್ಟ್ 31ರೊಳಗೆ ಜಿಲ್ಲೆಯ ಬೆಳೆ ಹಾನಿ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ