ಕಸ ಗುಡಿಸುವ ಕೋಟ್ಯಾಧಿಪತಿ..!!!

ಸೋಮವಾರ, 5 ಸೆಪ್ಟಂಬರ್ 2022 (16:50 IST)
10 ವರ್ಷಗಳಿಂದ ಈ ಹಣ ತೆಗೆದುಕೊಳ್ಳದ ಕಾರಣಕ್ಕಾಗಿ ಅಕೌಂಟ್‌ನಲ್ಲಿ 70 ಲಕ್ಷವಾಗಿ ಬೆಳೆದಿತ್ತು. ಭಿಕ್ಷೆ ಬೇಡುವ ಮೂಲಕ, ತಾಯಿಯ ಪಿಂಚಣಿ ಹಣದ ಮೂಲಕ ಜೀವನ ಸಾಗಿಸುತ್ತಿದ್ದ ಈತ ಟಿಬಿ ಕಾಯಿಲೆಗೂ ತುತ್ತಾಗಿದ್. ಹಾಗಿದ್ದರೂ ಈ ಹಣವನ್ನು ತೆಗೆದಿರಲಿಲ್ಲ. ಕೊನೆಗೆ ಇದೇ ಕಾಯಿಲೆಯಿಂದಾಗಿ ಶನಿವಾರ ಸಾವು ಕಂಡಿದ್ದಾರೆ. ಈತನ ಹೆಸರು ಧೀರಜ್‌. ಪ್ರಯಾಗ್‌ರಾಜ್‌ ಸಂಗಮ್‌ ಸಿಟಿಯಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಕಚೇರಿಯ ಕುಷ್ಠರೋಗ ವಿಭಾಗದ ಮಿಲಿಯನೇರ್‌ ವ್ಯಕ್ತಿ ಈತ. ಧೀರಜ್‌ನ ತಂದೆ ಕೂಡ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ತಂದೆ ಕೆಲಸದಲ್ಲಿರುವಾಗಲೇ ಸಾವು ಕಂಡಿದ್ದರು. ಆ ಬಳಿಕ ಅನುಕಂಪದ ಅಧಾರದ ಮೇಲೆ ಈ ಕೆಲಸ ಸಿಕ್ಕಿತ್ತು. ಧೀರಜ್‌ನ ತಂದೆ ಕೂಡ ಎಂದಿಗೂ ತನ್ನ ಸಂಬಳವನ್ನು ಖಾತೆಯಿಂದ ತೆಗೆದಿರಲಿಲ್ಲ. ಅದೇ ಹಾದಿಯಲ್ಲಿ ಸಾಗಿದ ಮಗ ಕೂಡ ಕಳೆದ 10 ವರ್ಷದಿಂದ ತನ್ನ ಸಂಬಳವನ್ನು ತೆಗೆದಿರಲಿಲ್ಲ.

ಧೀರಜ್ ಪ್ರಯಾಗರಾಜ್ ಜಿಲ್ಲಾ ಕುಷ್ಠರೋಗ ಇಲಾಖೆಯಲ್ಲಿ ಕಸಗುಡಿಸುವುದು ಮಾತ್ರವಲ್ಲ ವಾಚ್‌ಮನ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಆದಾಯ ತೆರಿಗೆಯನ್ನೂ ಕೂಡ ಈತ ಕಟ್ಟುತ್ತಿದ್ದ. ಇದೇ ವರ್ಷದ ಆರಂಭದಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಈತನ ಕಚೇರಿಗೆ ಬಂದು ಈತನನ್ನು ಹುಡುಕುವವರೆಗೂ, ಈತನೊಬ್ಬ ಕೋಟ್ಯಧಿಪತಿ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೀರಜ್‌ ಧರಿಸುವ ಕೊಳೆಯಾದ ಬಟ್ಟೆಗಳು ಹಾಗೂ ಆತನ ವೇಷಭೂಷಣ ನೋಡಿದ ಎಲ್ಲರೂ ಆತನನ್ನು ಭಿಕ್ಷುಕ ಎಂದುಕೊಂಡಿದ್ದರು. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಗಳು ಕಾಲಿಗೆ ಬಿದ್ದು, ಗೋಗೆರೆದು ಹಣ ಪಡೆಯುತ್ತಿದ್ದ. ಅವರೂ ಕೂಡ ಈತ ಬಡವ ಇರಬೇಕು ಎಂದುಕೊಂಡು ಹಣ ನೀಡುತ್ತಿದ್ದರು. ಆದರೆ, ಬ್ಯಾಂಕ್‌ನ ಅಧಿಕಾರಿಗಳು ಬಂದು ಧೀರಜ್‌ನ ಬಗ್ಗೆ ತಿಳಿಸಿದಾಗ ಸ್ವತಃ ಆಸ್ಪತ್ರೆಯ ಸಿಬ್ಬಂದಿಗಳೇ ಹೌಹಾರಿಹೋಗಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ