ಡ್ರಿಂಕ್ ಅಂಡ್ ಡ್ರೈವ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಸಂದಾಯ

ಬುಧವಾರ, 28 ಡಿಸೆಂಬರ್ 2022 (19:53 IST)
ನಗರದಲ್ಲಿ ಕುಡಿದು ವಾಹನ ಓಡಿಸುವವರ ಸಂಖ್ಯೆ ಗಣನೀಯವಗಿ ಏರಿಕೆ ಕಂಡಿದೆ. ಹಿಂದೆಂದೂ ದಾಖಲಾಗದಷ್ಟು ಡ್ರಿಂಕ್ ಅಂಡ್ ಡ್ರೈವ್ ಕೇಸ್ ಈ ವರ್ಷ ದಾಖಲಾಗಿದೆ. ಸಂಚಾರ ಪೊಲೀಸ್ರು 2022 ನವೆಂಬರ್ ವರೆಗೆ 26017 ಮದ್ಯಪ್ರಿಯರ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಕೇಸ್  ದಾಖಲಿಸಿದ್ದಾರೆ.ಈ ಮೂಲಕ ಮದ್ಯಪ್ರಿಯರು ಎಣ್ಣೆ ಜೊತೆದೆ ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ 26 ಕೋಟಿ ಸಂದಾಯ ಮಾಡಿದ್ದಾರೆ. 2020 ಹಾಗು 2021 ರಲ್ಲಿ ಕೋವಿಡ್ ಹಿನ್ನೆಲೆ ಡಿಡಿ ತಪಾಸಣೆ ಅಷ್ಟಾಗಿ ನಡೆದಿರಲಿಲ್ಲ.ಈ ವರ್ಷ ಆಕ್ಸಿಡೆಂಟ್ ತಡೆಯುವ ಸಲುವಾಗಿ ಪೊಲೀಸ್ರು ಡಿಡಿ ತಪಾಸಣೆ ನಡೆಸ್ತಿದ್ರು.2020 ರಲ್ಲಿ 5343 ಡ್ರಿಂಕ್ ಅಂಡ್ ಡ್ರೈವ್ ಕೇಸ್ ಗಳು ದಾಖಲಾಗಿದ್ರೆ,2021 ರಲ್ಲಿ 4144 ಡಿಡಿ ಕೇಸ್ ಗಳು ದಾಖಲಾಗಿದ್ವು.ಆದ್ರೆ ಈ ಬಾರಿ ಸಾಕಷ್ಟು ಜನ ಕುಡಿದು ಗಾಡಿ ಓಡಿಸಿ ಪೊಲೀಸ್ರ ಕೈಗೆ ಸಿಕ್ಕಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ