ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯರ ಬಡಿದಾಟ

ಬುಧವಾರ, 28 ಡಿಸೆಂಬರ್ 2022 (16:35 IST)
ಉತ್ತರಾಖಂಡ್‌ನ ರೂರ್ಕಿಯ ಹೋಟೆಲ್​ನ ಪಾರ್ಕಿಂಗ್​ನಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ​ಆಗಿದೆ. ಯಾವ ವಿಚಾರಕ್ಕೆ ಬಡಿದಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಹುಡುಗಿಯರ ಮಧ್ಯೆ ಮೊದಲು ವಾಗ್ವಾದ ಶುರುವಾಗಿದೆ. ಇದು ತಾರಕಕ್ಕೇರಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಬಡಿದಾಡಿಕೊಂಡ ಹುಡುಗಿಯರು ಶಾಲಾ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ನಾಲ್ವರಿಂದ ಐದು ಹುಡುಗಿಯರು ಬಡಿದಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಓರ್ವಳನ್ನು ನೆಲಕ್ಕೆ ಕೆಡವಿದ್ದಾರೆ. ನಂತರ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಓರ್ವ ಹುಡುಗಿ ಅಲ್ಲೆ ಇದ್ದ ಬಡಿಗೆಯನ್ನು ತಂದು ಕೆಳಗೆ ಬಿದ್ದ ಹುಡುಗಿಗೆ ಥಳಿಸಿದ್ದಾಳೆ. ಬಳಿಕ ಮತ್ತೋರ್ವಳು ಕೆಳಗೆ ಬಿದ್ದ ಹುಡುಗಿಯ ಕೂದಲು, ಅಂಗಿ ಹಿಡಿದು ಎಳೆದಾಡಿದ್ದಾಳೆ. ನಂತರ ಇಬ್ಬರು ಕೆಳಗೆ ಬಿದ್ದು ಗುದ್ದಾಡಿದ್ದಾರೆ. ಸದ್ಯ ಹುಡುಗಿಯರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ