ಕೋಟ್ಯಂತರ ರೂ. ಪಂಗನಾಮ: ಗ್ರೇಟ್ ಬ್ಯಾಂಕ್ ಮಾಲೀಕ ಅರೆಸ್ಟ್
ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದ ಬ್ಯಾಂಕ್ ಮಾಲೀಕನನ್ನು ಬಂಧನ ಮಾಡಲಾಗಿದೆ.
ಗ್ರೇಟ್ ಸೌಹಾರ್ದ ಮಲ್ಟೀ ಪರ್ಪಸ್ ಸಹಕಾರಿ ಬ್ಯಾಂಕ್ ಮಾಲೀಕ ಶಕೀಲ್ ಅಹಮ್ಮದ್ ವಂಚನೆ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.
ಚಿತ್ರದುರ್ಗ ಟೌನ್ ಸ್ಟೇಷನ್ ಪೊಲೀಸ್ ರಿಂದ ಕಾರ್ಯಾಚರಣೆ ನಡೆದು, ಬಂಧನ ಮಾಡಿದ್ದಲ್ಲದೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಗ್ರೇಟ್ ಸೌಹಾರ್ದ ಮಲ್ಟೀ ಪರ್ಪಸ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಜನರಿಗೆ ಕೋಟ್ಯಂತರ ರೂಪಾಯಿ ಪಂಗಾನಾಮ ಹಾಕಿದ್ದನು ಮಾಲಿಕ ಶಕೀಲ್ ಅಹಮ್ಮದ್.
ಹೂಡಿಕೆದಾರರು ನೀಡಿದ್ದ ದೂರಿನ ಹಿನ್ನಲೆ ಬ್ಯಾಂಕ್ ಮುಖ್ಯಸ್ಥ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.