ಹೊಸ ಬ್ಯಾಂಕ್ ಗಳಿಗೆ 2-3 ವರ್ಷಗಳ ಕಾಲ ಪರವಾನಗಿ ನೀಡಲ್ಲ- ಆರ್.ಬಿ.ಐ

ಬುಧವಾರ, 5 ಜೂನ್ 2019 (07:29 IST)
ನವದೆಹಲಿ : ಹೊಸ ಬ್ಯಾಂಕ್ ಗಳಿಗೆ 2-3 ವರ್ಷಗಳ ಕಾಲ ಪರವಾನಗಿ ನೀಡದಿರಲು ಆರ್.ಬಿ.ಐ. ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.



ಸೋಮವಾರದಿಂದ ಆರ್.ಬಿ.ಐ. ವಿತ್ತೀಯ ನೀತಿಯ ವಿಮರ್ಶೆ ಸಭೆ ನಡೆಯುತ್ತಿದ್ದು ಜೂನ್ 6 ರವರೆಗೆ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆರ್.ಬಿ.ಐ ಹಣಕಾಸು ಮೇಲ್ವಿಚಾರಣೆಯ ಮಂಡಳಿ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

 

 2015ರಲ್ಲಿ ಐಡಿಎಫ್ಸಿ ಬ್ಯಾಂಕ್, ಬಂಧನ್ ಬ್ಯಾಂಕ್ ಗೆ ಪರವಾನಗಿ ನೀಡಲಾಗಿತ್ತು. ಆ ವೇಳೆ 10 ಪೇಮೆಂಟ್ ಬ್ಯಾಂಕ್ ಹಾಗೂ 11 ಸಣ್ಣ ಹಣಕಾಸು ಬ್ಯಾಂಕ್ ಗಳಿಗೆ ಪರವಾನಗಿ ನೀಡಲಾಗಿತ್ತು. ಅಸ್ತಿತ್ವದಲ್ಲಿರುವ ಈ ಹೊಸ ಬ್ಯಾಂಕುಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ