ಸಿಎಂ ಸಿದ್ದರಾಮಯ್ಯ ಮೇಲೆ ಹಿಕ್ಕಿ ಹಾಕಿದ ಕಾಗೆ!

ಗುರುವಾರ, 19 ಜನವರಿ 2017 (18:04 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಗೆ ಕಾಟ ಮುಂದುವರೆದಿದ್ದು, ಇಂದು ಅವರ ಮೇಲೆ ಕಾಗೆ ಹಿಕ್ಕಿ ಹಾಕಿದ ಘಟನೆ ವರದಿಯಾಗಿದೆ. 
ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರುವ ಮಂಜೇಶ್ವರದಲ್ಲಿ ಗೋವಿಂದ ಪೈ ಗಿಳಿವಿಂಡ್ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ತೆರೆದ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಮೇಲೆ ಕಾಗೆ ಹಿಕ್ಕಿ ಹಾಕಿದೆ. ಕಾಗೆಯ ಹಿಕ್ಕಿ ಕಂಡು ಸಿಎಂ ವಿಚಲಿತರಾದರು. ತದನಂತರ ಸಿಎಂ ಪಂಚೆ ಮೇಲೆ ಬಿದಿದ್ದ ಕಾಗೆ ಹಿಕ್ಕಿಯನ್ನು ಸಿಬ್ಬಂದಿ ವರ್ಗದವರು ಶುಚಿಗೊಳಿಸಿದ ಘಟನೆ ನಡೆಯಿತು.

ತಮ್ಮ ಕಾರಿನ ಮೇಲೆ ಕಾಗೆ ಮರಿ ಕುಳಿತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾರನ್ನು ಬದಲಾಯಿಸಿದ್ದರು. ಇದೀಗ ಕಾಗೆ ಅವರ ಮೇಲೆ ಹಿಕ್ಕಿ ಹಾಕಿದ ಘಟನೆ ನಡೆದಿದ್ದು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿಕಾಟ ಶುರುವಾದಂತೆ ಗೋಚರವಾಗುತ್ತಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ