ಪುರುಷ, ಮಹಿಳೆಯರ ಮೇಲಿನ ಕ್ರೌರ್ಯ ಒಂದೇ ರೀತಿ ಇರೋದಿಲ್ಲ-ಸುಪ್ರೀಂ

ಶನಿವಾರ, 9 ಸೆಪ್ಟಂಬರ್ 2023 (16:40 IST)
ಕ್ರೌರ್ಯ ನಡೆಯುತ್ತಿದೆ ಎಂಬ ವಿಚಾರಕ್ಕೆ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ತೀರ್ಪು ನೀಡುವಾಗ ವಿಸ್ತೃತ ದೃಷ್ಟಿಕೋನದಿಂದ ನೋಡಬೇಕು. ಕ್ರೌರ್ಯ ಎಂಬುದು ಪುರುಷ ಮತ್ತು ಮಹಿಳೆಗೆ ಒಂದೇ ರೀತಿಯಾಗಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ವೇಳೆ, 1995ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13 (1)ರ ಅಡಿಯಲ್ಲಿ  ಕ್ರೌರ್ಯಕ್ಕೆ ನಿಗದಿತವಾದ ಅರ್ಥವನ್ನು ನೀಡಿಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದನ್ನು ಉದಾರವಾಗಿ ಮತ್ತು ಸನ್ನಿವೇಶ ಆಧಾರಿತವಾಗಿ ಬಳಸಿಕೊಳ್ಳಲು ಕೋರ್ಟ್‌ ಸ್ವವಿವೇಚನೆಯನ್ನು ಬಳಸಿಕೊಳ್ಳಬೇಕು ಎಂದು ನ್ಯಾ. ಸಂಜೀವ್‌ ಖನ್ನಾ ಮತ್ತು ನ್ಯಾ. ಎಂ.ಎಂ.ಸುಂದರೇಶ್‌ ಅವರಿದ್ದ ಪೀಠ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ